Home ಟಾಪ್ ಸುದ್ದಿಗಳು ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ರಾಜಕೀಯ ಇನಿಂಗ್ಸ್ ಮುಗಿಯಿತು: ಸೋನಿಯಾ ಗಾಂಧಿ

ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ರಾಜಕೀಯ ಇನಿಂಗ್ಸ್ ಮುಗಿಯಿತು: ಸೋನಿಯಾ ಗಾಂಧಿ

ರಾಯಿಪುರ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತರಾಗುವ ಸೂಚನೆಯನ್ನು ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆಯು ನನ್ನ ಮತ್ತು ಪಕ್ಷದ ನಡೆಯಲ್ಲಿ ಒಂದು ಮುಖ್ಯ ತಿರುವಾಗಿದೆ. ಇನ್ನು ಈ ಯಾತ್ರೆಯೊಂದಿಗೆ ನನ್ನ ಕರ್ತವ್ಯ ಮುಗಿಯಿತು ಎಂದು ಸೋನಿಯಾ ಗಾಂಧಿ ಹೇಳಿದರು.


ಛತ್ತೀಸ್’ಗಡದ ರಾಜಧಾನಿ ರಾಯಿಪುರದಲ್ಲಿ 15,000 ಜನ ಕಾಂಗ್ರೆಸ್ ಕಾರ್ಯಕರ್ತರಿಗೆ ನಡೆಯುತ್ತಿರುವ ಮನೋ ಮಂಥನ ಮೂರು ದಿನದ ಕಾರ್ಯಕ್ರಮದ ಮೊದಲ ದಿನ ಅವರು ಮಾತನಾಡಿದರು.
“ಇನ್ನು ನನಗೆ ಏನು ಉಳಿದಿದೆ, ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಕರ್ತವ್ಯ ಮುಗಿದಿದೆ. ಆ ಯಾತ್ರೆಯು ಒಂದು ತಿರುವು ಬಿಂದು ಆಗಿದೆ. ಈ ದೇಶದ ಜನರು ಸೌಹಾರ್ದ, ಸಹನೆ, ಸಮಾನತೆಯನ್ನು ಬಯಸಿದ್ದಾರೆ ಎನ್ನುವುದು ಆ ಯಾತ್ರೆಯಿಂದ ಗೊತ್ತಾಯಿತು.” ಎಂದು ಹೇಳಿದರು.
“ಭಾರೀ ಜನ ಸಂಪರ್ಕದೊಂದಿಗೆ ನಮ್ಮ ಪಕ್ಷವು ಅವರ ಜೊತೆಗೆ ಕಾರ್ಯಕ್ರಮದೊಂದಿಗೆ ಮಾತುಕತೆಯಾಡಿದೆ. ನಾವು ಜನರೊಂದಿಗೆ ನಿಲ್ಲುವುದು ಇದರಿಂದ ಖಚಿತವಾಗಿದೆ ಮತ್ತು ಅವರಿಗಾಗಿ ನಾವು ಹೋರಾಡುತ್ತೇವೆ” ಎಂದು ಸೋನಿಯಾ ಹೇಳಿದರು.


“ಭಾರತ್ ಜೋಡೋ ಯಾತ್ರೆಯಲ್ಲಿ ನಡೆದ ದುಡಿದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಮುಖ್ಯವಾಗಿ ರಾಹುಲ್ ನನ್ನು. ಯಾತ್ರೆಯ ಯಶಸ್ಸಿನಲ್ಲಿ ರಾಹುಲ್ ಗಾಂಧಿ ನಾಯಕತ್ವ ಚೆನ್ನಾಗಿ ಕೆಲಸ ಮಾಡಿದೆ” ಎಂದೂ ಅವರು ಹೇಳಿದರು.
ರಾಜಕೀಯ ನಿವೃತ್ತಿಯ ಸೂಚನೆ ನೀಡಿದ ಸೋನಿಯಾ ಅವರು ಹೆಚ್ಚಿನದಾಗಿ ಜನರೇ ಯೋಚಿಸಲಿ ಎಂದು ಹೇಳಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ರಾಯಿಬರೇಲಿಯಿಂದ ಸ್ಪರ್ಧಿಸುತ್ತಾರೆಯೇ, ಅಥವಾ ಕ್ಷೇತ್ರವನ್ನು ಮಗಳು ಪ್ರಿಯಾಂಕಾರಿಗೆ ಬಿಟ್ಟುಕೊಡುತ್ತಾರೆಯೇ ಎನ್ನುವುದು ಈಗಿನ ಪ್ರಮುಖ ಚಿಂತನೆಯಾಗಿದೆ.
ಈಗಿನದು ಕಾಂಗ್ರೆಸ್ಸಿಗೆ ಮಾತ್ರವಲ್ಲ ದೇಶಕ್ಕೇ ಒಂದು ಸವಾಲಿನ ಕಾಲವಾಗಿದೆ. ಪ್ರಧಾನಿ ಮೋದಿ ಮತ್ತು ಆರೆಸ್ಸೆಸ್ ಸಂಘ ಪರಿವಾರದವರು ಎಲ್ಲ ಸರಕಾರಿ ಸಂಸ್ಥೆಗಳನ್ನು ತಲೆ ಕೆಳಗು ಮಾಡಿದ್ದಾರೆ ಎಂದೂ ಅವರು ಹೇಳಿದರು.


“ಬಿಜೆಪಿಯು ಪ್ರತಿಪಕ್ಷಗಳ ಸ್ವರವನ್ನು ಹಠಮಾರಿತನದಿಂದ ಅದುಮಿಟ್ಟಿದೆ. ಎಲ್ಲರ ತಲೆಯ ಮೇಲಿನ ವೆಚ್ಚದಿಂದ ಕೆಲವೇ ಉದ್ಯಮಿಗಳನ್ನು ಬೆಳೆಸುವಲ್ಲಿ ಬಿಜೆಪಿ ಸಫಲವಾಗಿದೆ. ಭಾರತೀಯರ ಮೇಲೆಯೇ ಅದು ಭಯದ ಮತ್ತು ದ್ವೇಷದ ವಾತಾವರಣವನ್ನು ಹೇರಿದೆ” ಎಂದೂ ಸೋನಿಯಾ ಗಾಂಧಿ ದೂರಿದರು.
“ದೇಶದಲ್ಲಿ ಅಲ್ಪಸಂಖ್ಯಾಕರನ್ನು ಕಡೆಗಣಿಸಲಾಗಿದೆ. ಮಹಿಳೆಯರು, ಬುಡಕಟ್ಟು ಜನರು, ದಲಿತರ ಮೇಲೆ ತಾರತಮ್ಯ ದಾಳಿ ಮುಂದುವರಿದಿದೆ. ಬಿಜೆಪಿಯು ಗಾಂಧೀಜಿಯವರ ಮತ್ತು ಸಂವಿಧಾನದ ಮೌಲ್ಯಗಳನ್ನು ತನಗೆ ಬೇಕಾದಂತೆ ತಿರುಚಿಕೊಂಡು ಎಲ್ಲವನ್ನೂ ಅವಹೇಳನ ಮಾಡಿದೆ” ಎಂದೂ ಅವರು ತಿಳಿಸಿದರು.


“ನಮ್ಮ ಮುಂದೆ ತುಂಬ ಕಷ್ಟದ ಹೋರಾಟ ಇದೆ. ಇಂತಹ ಕಾಲ ಘಟ್ಟದಲ್ಲಿ ನಾವು ಪ್ರತಿಯೊಬ್ಬರೂ ದೇಶ ಮತ್ತು ಪಕ್ಷಕ್ಕಾಗಿ ವಿಶೇಷ ಜವಾಬ್ದಾರಿಯನ್ನು ಹೊತ್ತು ಕೆಲಸ ಮಾಡಬೇಕಾಗಿದೆ” ಎಂದು ಅವರು ಕರೆ ನೀಡಿದರು.

Join Whatsapp
Exit mobile version