Home ಟಾಪ್ ಸುದ್ದಿಗಳು ಬೃಹತ್ ಉದ್ಯೋಗ ಮೇಳದಲ್ಲಿ 4 ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ; 2 ಕೋಟಿ ಉದ್ಯೋಗದ ಭರವಸೆ...

ಬೃಹತ್ ಉದ್ಯೋಗ ಮೇಳದಲ್ಲಿ 4 ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ; 2 ಕೋಟಿ ಉದ್ಯೋಗದ ಭರವಸೆ ಈಡೇರಿಲ್ಲ – ಜಸ್ಟಿಸ್ ಸಂತೋಷ್ ಹೆಗ್ಡೆ

ಬೆಂಗಳೂರು: ಯುವ ಸಬಲೀಕರಣ ಮತ್ತು ಮಹಿಳಾ ಸಬಲೀಕರಣ, ಆರ್’ವಿಡಿ ಟ್ರಸ್ಟ್’ನಿಂದ ಬೆಂಗಳೂರಿನ ವಿವಿ ಪುರಂನ ಬಿಐಟಿ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಲಾಗಿದೆ.


ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಜಸ್ಟಿಸ್ ಸಂತೋಷ್ ಹೆಗ್ಡೆ, ಯಾರೋ ಮಹಾನುಭಾವ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಕೋಟ್ಯಂತರ ಜನ ನಿರುದ್ಯೋಗದಿಂದ ತೊಂದರೆ ಎದುರಿಸುತ್ತಿದ್ದಾರೆ. ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದವರಿಗಿಂತ ಎರಡು ಸಾವಿರ ಉದ್ಯೋಗ ದೊರಕಿಸಿಕೊಡುವುದು ಮೇಲು. ಇಂತಹ ಉದ್ಯೋಗ ಮೇಳಗಳಿಂದ ಜನರ ಸಂಕಷ್ಟ ಕಡಿಮೆಯಾಗುತ್ತದೆ ಎಂದರು.


ಉದ್ಯೋಗ ಮೇಳದಲ್ಲಿ ಹೋಂಡಾ, ಬಿಗ್ ಬಾಸ್ಕೆಟ್, ಅಮೆಜಾನ್, ಟೆಕ್ ರೈಟ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನೇತರ ವಲಯದ 125 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು. ಜೊತೆಗೆ ಸಾಲ ಸೌಲಭ್ಯಗಳೊಂದಿಗೆ ಸ್ವಯಂ ಉದ್ಯೋಗ ಅವಕಾಶಗಳಿಗೂ ಆದ್ಯತೆ ನೀಡಲಾಗುತ್ತಿತ್ತು. ವಿಶೇಷಚೇತನರಿಗೆ ಇದೇ ಸಮದರ್ಭದಲ್ಲಿ ಸೌಲಭ್ಯ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂತರ ಚಿತ್ರದ ನಾಯಕಿ ಸಪ್ತಮಿ ಗೌಡ ಚಿಕ್ಕಪೇಟೆ ಮಾಜಿ ಶಾಸಕ ಆರ್. ವಿ. ದೇವರಾಜ್, ಭಾರತ ಸಾರಥಿ ಕನ್ನಡ ದಿನಪತ್ರಿಕೆ ಸಂಪಾದಕ ಗಂಡಸಿ ಸದಾನಂದ ಸ್ವಾಮಿ, ಮಮತಾ ದೇವರಾಜ್, ಮಾಜಿನಗರ ಸಭಾ ಸದಸ್ಯ ಯುವರಾಜ್, ಕೆ ಎಂ ನಾಗರಾಜ್. ಕಾಂಗ್ರೆಸ್ ಮುಖಂಡ, ಬಿ ಐ ಟಿ ಶಿಕ್ಷಣ ಸಂಸ್ಥೆ ಅದ್ಯಕ್ಷ ಪುಟ್ಟಸ್ವಾಮಿ, ಚಿತ್ರನಟಿ ಭವ್ಯ, ಕೊನಪ್ಪ ರೆಡ್ಡಿ, ಅಶ್ವಥ್ ನಾರಾಯಣ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದರು.

Join Whatsapp
Exit mobile version