Home ಟಾಪ್ ಸುದ್ದಿಗಳು ಮುಸ್ಲಿಮರು ಮೊದಲು ಮನಸ್ಥಿತಿ ಬದಲಿಸಿಕೊಳ್ಳಬೇಕು ಎಂದ ಸಂಸದ ಪ್ರತಾಪ್ ಸಿಂಹ

ಮುಸ್ಲಿಮರು ಮೊದಲು ಮನಸ್ಥಿತಿ ಬದಲಿಸಿಕೊಳ್ಳಬೇಕು ಎಂದ ಸಂಸದ ಪ್ರತಾಪ್ ಸಿಂಹ

ಮೈಸೂರು: ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡುವ ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತೆ ನಾಲಗೆ ಹರಿಯಬಿಟ್ಟಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಲು ಹೊಡೆಯುವುದೇ ಮುಸ್ಲಿಮರ ಸಂಸ್ಕೃತಿ ಎಂದು ಹೇಳಿ ವಿವಾದಕ್ಕೀಡಾಗಿದ್ದಾರೆ. ಇವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಮುಸ್ಲಿಮರು ಹಿಂದೂಗಳ ಹಬ್ಬಗಳ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸುತ್ತಾರೆ. ಅಲ್ಲದೇ ಹಿಂದೂಗಳನ್ನು ಸೈತಾನರಂತೆ ನೋಡುತ್ತಾರೆ’ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದು, ಮುಸ್ಲಿಮರು ಮೊದಲು ಮನಸ್ಥಿತಿ ಬದಲಿಸಿಕೊಳ್ಳಬೇಕು ಎಂದು ಉಪದೇಶ ನೀಡಿದ್ದಾರೆ. ಕಲ್ಲು ತೂರುವ ಸಂಸ್ಕೃತಿ ಬಿಡದಿದ್ದರೆ ನಿಮ್ಮ ಮನೆಯ ಬಳಿಯೂ ಬುಲ್ಡೋಝರ್ ಬರಲಿದೆ ಎಂದು ಹೇಳಿದ್ದಾರೆ.


ಮುಸ್ಲಿಮರ ಮನಸ್ಥಿತಿ ಏನೆಂದು ಹುಬ್ಬಳ್ಳಿ ಸಹಿತ ರಾಜ್ಯದ ವಿವಿಧೆಡೆ ಸಂಭವಿಸಿದ ಗಲಭೆಗಳಲ್ಲಿ ಗೊತ್ತಾಗಿದೆ. ಹಿಂದೂಗಳೆಂದೂ ಮುಸ್ಲಿಮರ ಹಬ್ಬಗಳ ಮೆರವಣಿಗೆಗೆ ಕಲ್ಲು ತೂರಾಟ ನಡೆಸಿಲ್ಲ. ಕ್ರಿಶ್ಚಿಯನ್, ಪಾರ್ಸಿಗಳು ಸೇರಿದಂತೆ ಯಾವುದೇ ಧರ್ಮೀಯರು ಕಲ್ಲು ತೂರಿಲ್ಲ, ಆದರೆ ಮುಸ್ಲಿಮರು ಕಲ್ಲು ಹೊಡೆಯುವುದನ್ನೇ ಸಂಸ್ಕೃತಿಯಾಗಿಸಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

Join Whatsapp
Exit mobile version