ಮಂಗಳೂರು : ರಂಝಾನ್ ಉಪವಾಸ ವೃತಾಚರಣೆ ಕೊನೆಗೊಂಡ ಹಿನ್ನೆಲೆ ಇಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಸ್ಲಿಮ್ ಬಾಂಧವರು ಈದುಲ್ ಫಿತ್ರ್ ಹಬ್ಬವನ್ನ ಆಚರಿಸುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಲ್ಪಟ್ಟ ಹಿನ್ನೆಲೆ ಮನೆಯಲ್ಲಿಯೇ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಕುಟುಂಬಿಕರ ಜೊತೆಗೂಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಷಯವನ್ನು ವಿನಿಮಯ ಮಾಡಿಕೊಂಡರು. ಲಾಕ್ಡೌನ್ ನಿಂದಾಗಿ ಈದ್ ಹಬ್ಬದ ಶಾಪಿಂಗ್ ನಿಂದ ದೂರವುಳಿದಿದ್ದ ಮುಸ್ಲಿಮರು, ವಿವಿಧ ಧಾರ್ಮಿಕ ವಿಧ್ವಾಂಸರ ಕರೆಯಂತೆ ಸರಳವಾಗಿ ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಮುಕ್ತ ಭಾರತಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆಯೂ ಧಾರ್ಮಿಕ ನಾಯಕರು ಕರೆ ನೀಡಿದ್ದಾರೆ.