Home ಟಾಪ್ ಸುದ್ದಿಗಳು ಶನಿವಾರಸಂತೆಯಲ್ಲಿ ಮುಸ್ಲಿಮ್ ಯುವಕನ ಮೇಲೆ ಸಂಘಪರಿವಾರದಿಂದ ಹಲ್ಲೆ: ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸಿದ ಪೊಲೀಸರು

ಶನಿವಾರಸಂತೆಯಲ್ಲಿ ಮುಸ್ಲಿಮ್ ಯುವಕನ ಮೇಲೆ ಸಂಘಪರಿವಾರದಿಂದ ಹಲ್ಲೆ: ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸಿದ ಪೊಲೀಸರು

ಶನಿವಾರಸಂತೆ: ಬಸ್ ನಲ್ಲಿ ಬರುತ್ತಿದ್ದ ಸಹೋದರಿಯನ್ನು ಕರೆದುಕೊಂಡು ಹೋಗಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಮುಸ್ಲಿಮ್ ಯುವಕರಿಗೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಶನಿವಾರಸಂತೆಯಲ್ಲಿ ನಡೆದಿದ್ದು, ಸಂತ್ರಸ್ತರ ವಿರುದ್ಧವೇ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

 ಬಸ್ ನಲ್ಲಿ ಬರುತ್ತಿದ್ದ ಸಹೋದರಿಯನ್ನು ಕರೆದೊಯ್ಯಲು ನಿನ್ನೆ ರಶೀದ್ ಎಂಬವರು ಶನಿವಾರಸಂತೆ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಸಂಘಪರಿವಾರದ ತನ್ಮಯ್ ಸೇರಿದಂತೆ ಇತರ ಕೆಲವು ಕಾರ್ಯಕರ್ತರು ಏಕಾಏಕಿ ಅಲ್ಲಿಗೆ ಬಂದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದ ರಶೀದ್ ಅವರ ಸಹೋದರ ಅಝರ್ ಅಲ್ಲಿಗೆ ಬಂದು ಈ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ತನ್ಮಯ್ ಮತ್ತು ಗ್ಯಾಂಗ್, ಅಝರ್ ಮೇಲೂ ಹಲ್ಲೆ ನಡೆಸಿದೆ.

ಈ ಬಗ್ಗೆ ದೂರು ನೀಡಲು ಅಝರ್, ಇಮ್ರಾನ್ ಸೇರಿದಂತೆ ಅವರ ಸ್ನೇಹಿತರು ಶನಿವಾರಸಂತೆ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಇನ್ಸ್ ಪೆಕ್ಟರ್ ಬರುವವರೆಗೆ ಕುಳಿತುಕೊಳ್ಳಿ ಎಂದು ಠಾಣೆಯ ಸಿಬ್ಬಂದಿ ಹೇಳಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಠಾಣೆಗೆ ಬಂದ ಇನ್ಸ್ ಪೆಕ್ಟರ್ ಅವರು ಅಝರ್, ಇಮ್ರಾನ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ.

ಅಷ್ಟರಲ್ಲಿ ಸಂಘಪರಿವಾರದ ಕಾರ್ಯಕರ್ತರು ಕೂಡ ಠಾಣೆಯ ಮುಂಭಾಗ ಜಮಾಯಿಸಿ ಘೋಷಣೆ ಕೂಗಿದ್ದಾರೆ. ಈ ವೇಳೆ ಇಮ್ರಾನ್ ಮತ್ತು ಸಂಘಪರಿವಾರದವರ ನಡುವೆ ಮಾತಿನ ಚಕಮಕಿ ನಡೆದಿದೆ. ಇಮ್ರಾನ್ ಮೇಲೆ ಹಲ್ಲೆ ಕೂಡ ನಡೆದಿದೆ. ಆದರೂ ಪೊಲೀಸರು ಅಝರ್, ಇಮ್ರಾನ್ ಸೇರಿ 6ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 307 ನಡಿ ಪ್ರಕರಣ ದಾಖಲಿಸಿದ್ದಾರೆ.

ಈ ಹಿಂದೆ ಶನಿವಾರಸಂತೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಯಾಗಿದ್ದಾನೆ.

Join Whatsapp
Exit mobile version