Home ಟಾಪ್ ಸುದ್ದಿಗಳು ಮುಸ್ಲಿಮ್ ವಿದ್ಯಾರ್ಥಿ ಮೇಲೆ ಪೊಲೀಸರಿಂದ ಹಲ್ಲೆ: ಆರೋಪ

ಮುಸ್ಲಿಮ್ ವಿದ್ಯಾರ್ಥಿ ಮೇಲೆ ಪೊಲೀಸರಿಂದ ಹಲ್ಲೆ: ಆರೋಪ

ತೇರೆದಾಳ್: ವೀಡಿಯೋ ಮಾಡಿದ್ದಾನೆಂದು ಆರೋಪಿಸಿ ಮುಸ್ಲಿಮ್ ಯುವಕನ ಮೇಲೆ ಪ್ರಾಂಶುಪಾಲರ ಸಮ್ಮುಖದಲ್ಲೇ ಪೊಲೀಸರು ಹಲ್ಲೆ ಮಾಡಿರುವ ಘಟನೆ ತೇರೆದಾಳ್ ನಲ್ಲಿ ನಡೆದಿದೆ.


ನವೀದ್ ಹಸನ್ (19) ಹಲ್ಲೆಗೊಳಗಾದ ವಿದ್ಯಾರ್ಥಿ. ಈತ ಫೆ.18 ರಂದು ತರಗತಿಯಲ್ಲಿ ಟೋಪಿ ಧರಿಸಿ ಕುಳಿತುಕೊಂಡಿದ್ದ. ಆದರೆ ಪ್ರಾಂಶುಪಾಲರು ಟೋಪಿ ಧರಿಸಿದ ಕಾರಣಕ್ಕೆ ತರಗತಿಯಿಂದ ಹೊರಹಾಕಿದ್ದಾರೆ.


ಬಳಿಕ ಮರುದಿನ ಆತನನ್ನು ಕಾಲೇಜಿಗೆ ಬರಲು ಹೇಳಿದ್ದಾರೆ. ಈ ವೇಳೆ ಪೊಲೀಸರು ಕೂಡ ಅಲ್ಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ನವೀದ್, ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡಿದ್ದಾನೆ ಎಂಬ ಕಾರಣಕ್ಕೆ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿದ್ದಾರೆಂದು ಯುವಕ ಹೇಳಿದ್ದಾನೆ.

Join Whatsapp
Exit mobile version