Home ಟಾಪ್ ಸುದ್ದಿಗಳು ಮನೆ ಪಕ್ಕದಲ್ಲೇ ಮುಸ್ಲಿಂ ಕುಟುಂಬ, ಈದ್ ದಿನ ನಮ್ಮ ಮನೆಗಳಲ್ಲಿ ಅಡುಗೆ ಮಾಡುತ್ತಿರಲಿಲ್ಲ: ಮೋದಿ

ಮನೆ ಪಕ್ಕದಲ್ಲೇ ಮುಸ್ಲಿಂ ಕುಟುಂಬ, ಈದ್ ದಿನ ನಮ್ಮ ಮನೆಗಳಲ್ಲಿ ಅಡುಗೆ ಮಾಡುತ್ತಿರಲಿಲ್ಲ: ಮೋದಿ

ವಾರಾಣಸಿ: ನನ್ನ ಅನೇಕ ಸ್ನೇಹಿತರು ಮುಸ್ಲಿಮರು. ನನ್ನ ಮನೆಯ ಪಕ್ಕದಲ್ಲೇ ಮುಸ್ಲಿಂ ಕುಟುಂಬಗಳು ವಾಸವಾಗಿದ್ದವು. ಈದ್ ದಿನದಂದು ನಮ್ಮ ಮನೆಗಳಲ್ಲಿ ಅಡುಗೆಯನ್ನೇ ಮಾಡುತ್ತಿರಲಿಲ್ಲ. ನಮ್ಮ ಮನೆಗೆ ಎಲ್ಲಾ ಮುಸ್ಲಿಂ ಕುಟುಂಬಗಳಿಂದ ಊಟ ಬರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನ್ಯೂಸ್ 18 ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೋದಿ ವಿವಾದಕ್ಕೊಳಗಾದ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನ್ಯೂಸ್ 18 ಇಂಡಿಯಾದ ಕನ್ಸಲ್ಟಿಂಗ್ ಎಡಿಟರ್ ರುಬಿಕಾ ಲಿಯಾಕತ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ‘ನುಸುಳುಕೋರರು’ ಮತ್ತು ‘ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ’ ಹಂಚುತ್ತಾರೆ ಎಂದು ಹೇಳಿದ್ದೀರಿ, ಏಕೆ ಆ ರೀತಿ ಹೇಳಿದ್ದೀರಿ ಎಂದು ರುಬಿಕಾ ಲಿಯಾಕತ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ಮೊದಲಿಗೆ ನಾನು ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ಆ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನಾನು ಮುಸ್ಲಿಮರ ಮೇಲಿರುವ ಪ್ರೀತಿಯನ್ನು ಮಾರಾಟ ಮಾಡುವುದಿಲ್ಲ. ನಾನು ಹಿಂದೂ-ಮುಸ್ಲಿಂ ಎಂದು ರಾಜಕೀಯ ಮಾಡುವುದಿಲ್ಲ. ಹಾಗೆ ಮಾಡಲು ಪ್ರಾರಂಭಿಸಿದ ದಿನ ನಾನು ರಾಜಕೀಯವನ್ನು ತೊರೆಯುತ್ತೇನೆ. ನಾನು ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡಿಲ್ಲ, ಪ್ರತಿ ಬಡ ಕುಟುಂಬದ ಬಗ್ಗೆಯೂ ಮಾತನಾಡಿದ್ದೇನೆ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ. ಇದು ನನ್ನ ನಿರ್ಣಯ ಎಂದಿದ್ದಾರೆ.

ಇತರ ಪ್ರಶ್ನೆಗಳಿಗೆ ಉತ್ತರವಾಗಿ ಪ್ರಧಾನಿ, ಇದು ಮುಸಲ್ಮಾನರ ಪ್ರಶ್ನೆಯಲ್ಲ. ವೈಯಕ್ತಿಕವಾಗಿ ಮುಸ್ಲಿಮರು ನನ್ನನ್ನು ಇಷ್ಟಪಡಬಹುದು. ಆದರೆ 2002 ರ ನಂತರ ನನ್ನ ಇಮೇಜ್‌ಗೆ ಕಳಂಕವಾಯಿತು. ನನ್ನ ಬಾಲ್ಯದಲ್ಲಿ ನಾನು ಮುಸ್ಲಿಂ ಕುಟುಂಬಗಳ ನಡುವೆ ಬದುಕಿದ್ದೇನೆ ಎಂದಿದ್ದಾರೆ.

ನನ್ನ ಅನೇಕ ಸ್ನೇಹಿತರು ಮುಸ್ಲಿಮರು. ನನ್ನ ಮನೆಯ ಪಕ್ಕದಲ್ಲೇ ಮುಸ್ಲಿಂ ಕುಟುಂಬಗಳು ವಾಸವಾಗಿದ್ದವು. ಈದ್ ದಿನದಂದು ನಮ್ಮ ಮನೆಗಳಲ್ಲಿ ಅಡುಗೆಯನ್ನೇ ಮಾಡುತ್ತಿರಲಿಲ್ಲ. ನಮ್ಮ ಮನೆಗೆ ಎಲ್ಲಾ ಮುಸ್ಲಿಂ ಕುಟುಂಬಗಳಿಂದ ಊಟ ಬರುತ್ತಿತ್ತು. ಮಾಣಿಕ್ ಚೌಕ್‌ನಲ್ಲಿರುವ ಎಲ್ಲಾ ವ್ಯಾಪಾರಿಗಳು ಹಿಂದೂಗಳು. ಅಂಗಡಿಯವರೆಲ್ಲ ಮುಸ್ಲಿಮರು. ದೀಪಾವಳಿ ಸಂದರ್ಭದಲ್ಲಿ ಭಾರೀ ಜನಸಂದಣಿ ಇರುತ್ತದೆ. ನಾನು 2002 ರಲ್ಲಿ ಅಲ್ಲಿ ಸಮೀಕ್ಷೆಯನ್ನು ಮಾಡಿಸಿದ್ದೇನೆ. ನಾನು ಸಮೀಕ್ಷೆ ಮಾಡಲು ಹುಡುಗರನ್ನು ಕಳುಹಿಸಿದೆ. ಅಲ್ಲಿ ಮುಸಲ್ಮಾನರು ಹೇಳುತ್ತಿದ್ದರು. ಮೋದಿ ಇಲ್ಲದಿದ್ದರೆ ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಮೋದಿ ಬಂದ ನಂತರ ಮಕ್ಕಳ ಬದುಕು ಬದಲಾಯಿತು ಎಂದು ಅವರ ತಾಯಿ ಸಂತಸಪಟ್ಟರು ಎಂದು ಮೋದಿ ಹೇಳಿದ್ದಾರೆ.


Join Whatsapp
Exit mobile version