ದಲಿತ ಯುವಕನ ಕೊಲೆ ಪ್ರಕರಣ| ನಾಲ್ವರ ಬಂಧನ

Prasthutha|

ಜೈಪುರ: ದಲಿತ ಯುವಕನನ್ನು ಹತ್ಯೆಗೈದು ಆತನ ಶವವನ್ನು ಮನೆಯ ಮುಂದೆ ಬಿಟ್ಟು ಪರಾರಿಯಾಗಿದ್ದ ನಾಲ್ವರನ್ನು ಬಂಧಿಸಲಾಗಿದೆ.

- Advertisement -

ರಾಜಸ್ಥಾನದ ಹನುಮಾನ್ ಘರ್ ನಲ್ಲಿ ನಡೆದ ಕ್ರೂರ ಘಟನೆಯಲ್ಲಿ ಪ್ರೇಂಪುರ ನಿವಾಸಿ ಜಗದೀಶ್ ಮೇಘ್ವಾಲ್ ಹತ್ಯೆಯಾದ ದಲಿತ ಯುವಕ.  ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಆರೋಪಿಸಿ ಪತಿ ಮತ್ತು ಸಂಬಂಧಿಕರು ಜಗದೀಶನನ್ನು ಕ್ರೂರವಾಗಿ ಹತ್ಯೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆರೋಪಿಗಳು ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಯುವಕನನ್ನು ಆರು ಜನರ ತಂಡ ಕ್ರೂರವಾಗಿ ಹಿಂಸಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

Join Whatsapp
Exit mobile version