Home ಟಾಪ್ ಸುದ್ದಿಗಳು ಮಲಯಾಳಂ ಖ್ಯಾತ ನಟ ನೆಡುಮುಡಿ ವೇಣು ನಿಧನ

ಮಲಯಾಳಂ ಖ್ಯಾತ ನಟ ನೆಡುಮುಡಿ ವೇಣು ನಿಧನ

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಟ ನೆಡುಮುಡಿ ವೇಣು ನಿಧನರಾಗಿದ್ದಾರೆ.

ಅವರಿಗೆ 73 ವರ್ಷ ವಯಸ್ಸಾಗಿತ್ತು.  

ರಂಗಭೂಮಿಯಲ್ಲಿ ನಟನಾ ವೃತ್ತಿಜೀವನ ಆರಂಭಿಸಿದ್ದ ವೇಣು ಬಳಿಕ ಬೆಳ್ಳಿತೆರೆಗೆ ಪ್ರವೇಶಿಸಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.


ನಾಯಕ, ಖಳನಾಯಕ ಮತ್ತು ಪೋಷಕ ನಟನಾಗಿ ತೆರೆಯಲ್ಲಿ ಮಿಂಚಿದ್ದ ವೇಣು, ಗಂಭೀರ ಮತ್ತು ತಮಾಷೆಯ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದರು.


ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಆರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾಗಿರುವ ವೇಣು ಚಿತ್ರಕಥೆಗಳನ್ನೂ ಬರೆದಿದ್ದಾರೆ.


ಯವನಿಕಾ ಚಿತ್ರದಲ್ಲಿ ಬಾಲಗೋಪಾಲನ್,ಠಾಕರದಲ್ಲಿ ಚೆಲ್ಲಪ್ಪನಸಾರಿ , ಚಾಮರಂನಲ್ಲಿ ಕ್ರಿಶ್ಚಿಯನ್ ಪಾದ್ರಿ, ಆರೋಮರಿಯಥೆಯಲ್ಲಿ ಗೋವಿಂದನಕುಟ್ಟಿ ಮತ್ತು ಓರು ಮಿನ್ನಮಿಂಗುಂಟಿ ನೂರುಂಗುವೆಟ್ಟಂನಲ್ಲಿ ರಾವುಣ್ಣಿ ನಾಯರ್ ಪಾತ್ರಗಳು
ಅವರ ಸ್ಮರಣೀಯ ಪಾತ್ರಗಳು.

ಇನ್ನೂ ಬಿಡುಗಡೆಯಾಗಬೇಕಿರುವಮೋಹನ್ ಲಾಲ್ ಮತ್ತು ಪ್ರಿಯದರ್ಶನ್ ಅವರ ಬಿಗ್‌ ಬಜೆಟ್ ಸಿನಿಮಾ ಮರಕ್ಕಾರ್: ಅರಬಿಕಡಲಿಲೆ ಸಿಂಹಮ್ ನಲ್ಲಿ ನೆಡುಮುಡಿ ಕೊನೆಯದಾಗಿ ಅಭಿನಯಿಸಿದ್ದರು.

ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಆರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.  ಇವರು ಪತ್ನಿ ಟಿ.ಆರ್. ಸುಶೀಲ ಮಗಳು ಉಣ್ಣಿ ಗೋಪಾಲ್ ಮತ್ತು ಮಗ ಕಣ್ಣನ್ ಗೋಪಾಲ್ ಅವರನ್ನು ಅಗಲಿದ್ದಾರೆ.

Join Whatsapp
Exit mobile version