Home ಕರಾವಳಿ ಆನ್ಲೈನಿನಲ್ಲಿ ಸಾಲ ಪಡೆದ ಮುಲ್ಕಿಯ ಯುವಕ ಆತ್ಮಹತ್ಯೆ

ಆನ್ಲೈನಿನಲ್ಲಿ ಸಾಲ ಪಡೆದ ಮುಲ್ಕಿಯ ಯುವಕ ಆತ್ಮಹತ್ಯೆ

ಸುರತ್ಕಲ್: ಮೂಲತಃ ಮುಲ್ಕಿ ಮೂಲದ ಯುವಕ ಸಾಲಬಾಧೆಯಿಂದ ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ಎಂಬಲ್ಲಿನ ತಾನು ಕೆಲಸ ನಿರ್ವಹಿಸುವ ಸನ್ ರೈಸ್ ಕಾರ್ಪೋರೇಷನ್ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಆತ್ಮಹತ್ಯೆ ಪತ್ರದಲ್ಲಿ ನಾನು ಆನ್ಲೈನಿನಲ್ಲಿ ಪಡೆದಿರುವ ಸಾಲದವರು ನನ್ನನ್ನು ಕೇಳಿಕೊಂಡು ಬಂದ್ರೆ ನಾನು ಸತ್ತು ಹೋಗಿದ್ದೇನೆ ಎಂದು ತಿಳಿಸಿ ಎಂದು ಬರೆದಿದ್ದಾರೆ.

ಕಿನ್ನಿಗೋಳಿಯ ದಿ! ದಿನೇಶ್ ಎಂಬವರ ಮಗನಾದ ಸುಶಾಂತ್ (26) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ಆರ್ಥಿಕ ಸಂಕಷ್ಟ ಮತ್ತು ಸಾಲಬಾಧೆಯಿಂದಾಗಿ ಈತ ಆತ್ಮಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈತನ ಪೋಷಕರು ಸುಮಾರು 15 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಸದ್ಯ ಮೃತ ಸುಶಾಂತ್ ಹಿರಿಯ ಸಹೋದರ ಅಶ್ವಿತ್ ಸೇರಿದಂತೆ ಹಲವಾರು ಬಂಧುಮಿತ್ರರನ್ನು ಅಗಲಿದ್ದಾರೆ.

Join Whatsapp
Exit mobile version