Home ಟಾಪ್ ಸುದ್ದಿಗಳು ಅವಧೇಶ್ ರಾಯ್ ಹತ್ಯೆ ಪ್ರಕರಣ: ಮುಖ್ತಾರ್ ಅನ್ಸಾರಿ ದೋಷಿ

ಅವಧೇಶ್ ರಾಯ್ ಹತ್ಯೆ ಪ್ರಕರಣ: ಮುಖ್ತಾರ್ ಅನ್ಸಾರಿ ದೋಷಿ

ದೆಹಲಿ: 1991ರ ಅವಧೇಶ್ ರಾಯ್ ಹತ್ಯೆ ಪ್ರಕರಣದಲ್ಲಿ ರಾಜಕಾರಣಿ ಮುಖ್ತಾರ್ ಅನ್ಸಾರಿ ದೋಷಿ ಎಂದು ಉತ್ತರ ಪ್ರದೇಶದ ವಾರಣಾಸಿಯ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.


ಸೋಮವಾರ ಮಧ್ಯಾಹ್ನ 2 ಗಂಟೆಗೆ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ನ್ಯಾಯಾಲಯದ ಆವರಣ ಮತ್ತು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಆಗಸ್ಟ್ 3, 1991 ರಂದು, ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಅಜಯ್ ರಾಯ್ ಅವರ ಸಹೋದರ ಅವಧೇಶ್ ರಾಯ್ ನ್ನು ವಾರಣಾಸಿಯಲ್ಲಿ ಅಜಯ್ ರಾಯ್ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಿಲಾಗಿತ್ತು. ಈ ಪ್ರಕರಣದಲ್ಲಿ ಅಜಯ್ ರಾಯ್ ಅವರು ಮುಖ್ತಾರ್ ಅನ್ಸಾರಿ, ಭೀಮ್ ಸಿಂಗ್ ಮತ್ತು ಮಾಜಿ ಶಾಸಕ ಅಬ್ದುಲ್ ಕಲೀಂ ಅವರನ್ನು ಎಫ್ ಐ ಆರ್ ನಲ್ಲಿ ಹೆಸರಿಸಿದ್ದರು.

Join Whatsapp
Exit mobile version