Home ಟಾಪ್ ಸುದ್ದಿಗಳು ಮೊಘಲರೇ ನಿಜವಾಗಿ ಈ ದೇಶ ಕಟ್ಟಿದ್ದು, ಅವರು ದುಷ್ಟರಲ್ಲ: ನಿರ್ದೇಶಕ ಕಬೀರ್ ಖಾನ್

ಮೊಘಲರೇ ನಿಜವಾಗಿ ಈ ದೇಶ ಕಟ್ಟಿದ್ದು, ಅವರು ದುಷ್ಟರಲ್ಲ: ನಿರ್ದೇಶಕ ಕಬೀರ್ ಖಾನ್

ಮುಂಬಯಿ: ಭಾರತದಲ್ಲಿ ಆಡಳಿತ ನಡೆಸಿದ ಮೊಘಲರನ್ನು ದುಷ್ಟರಂತೆ ಬಿಂಬಿಸಿರುವ ಸಿನಿಮಾಗಳು ತುಂಬಾ ಗೊಂದಲಕಾರಿಯಾಗುತ್ತದೆ. ಯಾಕೆಂದರೆ ಕೇವಲ ಜನಪ್ರಿಯತೆಗಾಗಿ ಸಿನಿಮಾ ಕಥೆಯನ್ನು ಹೆಣೆದಿರುತ್ತಾರೆಯೇ ಹೊರತು, ಐತಿಹಾಸಿಕ ಪುರಾವೆಗಳನ್ನು ಆಧರಿಸಿದ ಸಿನಿಮಾ ಕಥೆ ಆಗಿರುವುದಿಲ್ಲ ಎಂದು ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಬಜರಂಗಿ ಭಾಯಿಜಾನ್, ಏಕ್ ಥಾ ಟೈಗರ್ ಸಿನಿಮಾ ನಿರ್ದೇಶಕ ಕಬೀರ್ ಖಾನ್ ಇತ್ತೀಚೆಗೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದರು, ಮೊಘಲರನ್ನು ಕೆಟ್ಟದಾಗಿ ಬಿಂಬಿಸಿರುವ ಸಿನಿಮಾಗಳನ್ನು ನಾನು ಯಾವತ್ತೂ ಗೌರವಿಸುವುದಿಲ್ಲ. ಯಾಕೆಂದರೆ ಮೊಘಲರೇ ನಿಜವಾಗಿ ಈ ದೇಶವನ್ನು ಕಟ್ಟಿದ್ದು ಎಂಬುದಾಗಿ ವಿಶ್ಲೇಷಿಸಿದರು.
ಕೆಟ್ಟ ರಾಜಕೀಯದಿಂದಾಗಿ ಯಾವುದೇ ಸಿನಿಮಾವನ್ನು ನಿರ್ಮಿಸಿದರೂ ಕೂಡಾ ನನ್ನಲ್ಲಿ ಆಕ್ರೋಶ ಹುಟ್ಟಿಸುತ್ತದೆ.
ಒಂದು ವೇಳೆ ನಿಮಗೆ ಮೊಘಲರನ್ನು ದುಷ್ಟರಂತೆ ತೋರಿಸಬೇಕಿದ್ದರೂ ಕೂಡಾ ದಯವಿಟ್ಟು ಇತಿಹಾಸದ ಬಗ್ಗೆ ಅಧ್ಯಯನ ನಡೆಸಿ, ಯಾಕೆ ಅನಗತ್ಯವಾಗಿ ಮೊಘಲರನ್ನು ವಿಲನ್ ಗಳಂತೆ ಬಿಂಬಿಸುತ್ತೀರಿ ಎಂದು ಖಾನ್ ಪ್ರಶ್ನಿಸಿದ್ದಾರೆ.

Join Whatsapp
Exit mobile version