ನವದೆಹಲಿ: ತಮ್ಮ ವಿರುದ್ಧ ಟ್ವಿಟ್ಟರ್ ನಲ್ಲಿ ಏನೂ ಬರೆಯದಂತೆ ಸಂಸದರಿಗೆ ಎಚ್ಚರಿಕೆ ನೀಡಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕಲಾಪದ ಸಂದರ್ಭದಲ್ಲಿ ಬಿರ್ಲಾ ಯಾವುದೇ ಸದಸ್ಯರ ಹೆಸರನ್ನು ಪ್ರಸ್ತಾಪಿಸದಿದ್ದರೂ, ಶೂನ್ಯ ವೇಳೆಯಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯೆ ಮಹುವಾ ಮೊಯಿತ್ರಾ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪಿಸಿದ ತಕ್ಷಣ ಲೋಕಸಭೆಯಲ್ಲಿ ಓಂ ಬಿರ್ಲಾ ಅವರ ಈ ಹೇಳಿಕೆ ಬಂದಿದೆ.
” ಕೆಲವೊಮ್ಮೆ ಸ್ಪೀಕರ್ ಸದಸ್ಯರಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಕೆಲವು ಸದಸ್ಯರು ಟ್ವಿಟರ್ ನಲ್ಲಿ ಬರೆಯುತ್ತಿದ್ದಾರೆ. ಸ್ಪೀಕರ್ ಬಗ್ಗೆ ಸದಸ್ಯರು ಟ್ವಿಟ್ಟರ್ ನಲ್ಲಿ ಬರೆಯಬಾರದು ಎಂಬುದನ್ನು ದಯವಿಟ್ಟು ನೆನಪಿನಲ್ಲಿಡುವುದು ಒಳ್ಳೆಯದು” ಎಂದು ಅವರು ಹೇಳಿದ್ದಾರೆ.
ಹಿರಿಯ ನಾಗರಿಕರು ಪ್ರಯಾಣ ಬೆಳೆಸುವಾಗ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮೊಯಿತ್ರಾ ಪ್ರಸ್ತಾಪಿಸಿದ್ದರು.