Home Uncategorized ಪ್ರಚೋದನಕಾರಿ ಹೇಳಿಕೆ ‌ನೀಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ SDPI ಯಿಂದ ಮಡಿಕೇರಿ...

ಪ್ರಚೋದನಕಾರಿ ಹೇಳಿಕೆ ‌ನೀಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ SDPI ಯಿಂದ ಮಡಿಕೇರಿ ಠಾಣೆಯಲ್ಲಿ ದೂರು ದಾಖಲು

ಮಡಿಕೇರಿ: ಹಿಜಾಬ್-ಟೋಪಿ ಹಾಕಿಕೊಂಡು ಮದರಸಗೆ ಹೋಗಿ, ಶಾಲೆಗಲ್ಲ ಹಾಗೂ ಇಸ್ಲಾಂ,ಕ್ರೈಸ್ತ ಧರ್ಮಗಳು ಪರದೇಶದಿಂದ ಬಂದ ಧರ್ಮ,ಇದು ಬ್ರಿಟಿಷ್ ಭಾರತ ಅಲ್ಲ,ಹಿಂದೂ ಧರ್ಮದ ಭದ್ರ ಭಾರತ,ಗಣಪತಿ ಪೂಜೆ, ಹೆಣ್ಣು ಮಕ್ಕಳ ಕುಂಕುಮ‌ ಇದನ್ನು ಯಾರು ಪ್ರಶ್ನಿಸುವಂತಿಲ್ಲ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಸ್ ಡಿಪಿಐಯಿಂದ ಮಡಿಕೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.  

ಸಂವಿಧಾನ ವಿರೋಧಿಯಾಗಿ ಮತ್ತು  ಮುಸ್ಲಿಂ ಸಮುದಾಯದ ವಿರುದ್ಧವಾಗಿ ಸಂಸದ ಪ್ರತಾಪ್ ಸಿಂಹ ಪ್ರಚೋದನಕಾರಿ ಮಾತುಗಳನ್ನು ಆಡಿ ಕೋಮು ಗಲಭೆಗೆ ಯತ್ನಿಸಿದ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್‌ಡಿಪಿಐ ಮಡಿಕೇರಿ ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯ ಅಶ್ರಫ್ ಕೆ.ವೈ ಯವರು ಮಡಿಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Join Whatsapp
Exit mobile version