Home ಟಾಪ್ ಸುದ್ದಿಗಳು ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾದ ಭಾರತೀಯ ನೌಕಾಪಡೆಯ ಜಾಬಿರ್

ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾದ ಭಾರತೀಯ ನೌಕಾಪಡೆಯ ಜಾಬಿರ್

ಕೇರಳ: 400 ಮೀಟರ್ ಹರ್ಡಲ್ಸ್ ನಲ್ಲಿ ಟೋಕಿಯೋ ಒಲಂಪಿಕ್ಸ್ ಗೆ ಭಾರತೀಯ ನೌಕಾಪಡೆಯ ಅಥ್ಲೀಟ್ ಆಗಿರುವ ಕೇರಳ ಮಲಪ್ಪುರಂ ಜಿಲ್ಲೆಯ ಎಂಪಿ ಜಾಬಿರ್ ಆಯ್ಕೆಯಾಗಿದ್ದಾರೆ.


ಪಟಿಯಾಲದಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದ ಜಾಬಿರ್ 49.78 ಸೆಂಕೆಂಡ್ ಗಳಲ್ಲಿ ಗುರಿ ತಲುಪಿದ್ದಾರೆ ಎಂದು ಭದ್ರತಾ ವಕ್ತಾರರೋರ್ವರು ತಿಳಿಸಿದ್ದಾರೆ. ಪ್ರಸ್ತುತ ಜಾಬಿರ್ ಭಾರತೀಯ ನೌಕಾದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ವಿಶ್ವ ರ್ಯಾಂಕಿಂಗ್ ಕೋಟದಲ್ಲಿ ಒಟ್ಟು 14 ಸ್ಥಾನಗಳಿದ್ದು, ಇದರ ಅನ್ವಯ ಜಾಬಿರ್ ಆಯ್ಕೆಯಾಗಿದ್ದಾರೆ. ಒಟ್ಟು 40 ಮಂದಿ ಅಥ್ಲೀಟ್ ಗಳು ಆಯ್ಕೆಯಾಗಿದ್ದು ಜಾಬಿರ್ ಈಗಾಗಲೇ ವಿಶ್ವ ಮಟ್ಟದಲ್ಲಿ 34ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.


ಟೋಕಿಯೋ ಒಲಿಂಪಿಕ್ಸ್ ಅನ್ನು ಪೂರ್ತಿಗಿಳಿಸಿದರೆ 400 ಮೀ. ಹರ್ಡಲ್ಸ್ ವಿಭಾಗದಲ್ಲಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಪ್ರಥಮ ಪುರುಷ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ ಕೇರಳ ಮೂಲದವರೇ ಆಗಿದ್ದ ಪಿಟಿ ಉಷಾ ಹರ್ಡಲ್ ನಲ್ಲಿ ಭಾರತದವನ್ನು ಪ್ರತಿನಿಧಿಸಿದ್ದರು. ಈ ಹಿಂದೆಯೂ ಜಾಬಿರ್ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದ್ದರು.

Join Whatsapp
Exit mobile version