ಬಹರೈನ್: ವ್ಯಕ್ತಿಯೋರ್ವರ ಸಂಕಷ್ಟಕ್ಕೆ ಸ್ಪಂದಿಸಿ ಅವರನ್ನ ತವರಿಗೆ ಕಳುಹಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಯಶಸ್ವಿಯಾಗಿದೆ. ಉದ್ಯೋಗ ನಿಮಿತ್ತ ಬಹರೈನ್ ರಾಷ್ಟ್ರಕ್ಕೆ ತೆರಳಿದ್ದ ತುಮಕೂರು ಜಿಲ್ಲೆಯ ಶಿರಾ ನಿವಾಸಿ ಖ್ವಾಜಾ ಗರೀಬ್ ನವಾಝ್ ಎಂಬವರು ಅಲ್ಲಿ ಹಲವು ರೀತಿಯ ತೊಂದರೆ ಅನುಭವಿಸಿದ್ದು, ಸಂಘ ಸಂಸ್ಥೆ ಹಾಗೂ ದಾನಿಗಳ ನೆರವಿನಿಂದ ಇದೀಗ ತವರಿಗೆ ಮರಳಿದ್ದಾರೆ.
ವಾಟ್ಸಾಪ್ ಜಾಲತಾಣದಲ್ಲಿ ಬಂದ ಮೆಸೇಜ್ ವೊಂದನ್ನ ಆಧರಿಸಿ ಕಾರ್ಯಾಚರಣೆ ನಡೆಸಿದ್ದ ಇಂಡಿಯನ್ ಸೋಶಿಯಲ್ ಫೋರಂ ಗರೀಬ್ ನವಾಝ್ ಅವರನ್ನು ಸಂಪರ್ಕಿಸಿ ಧೈರ್ಯ ತುಂಬಿತ್ತು. ಬಳಿಕ ISF ಹಾಗೂ ICRF ಸಂಘಟನೆಗಳ ಮಾನವೀಯ ನೆರವಿನಿಂದ ಅವರನ್ನ ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಾಯಿತು.
ಬೆಂಗಳೂರಿನಿಂದ ತುಮಕೂರಿನ ಶಿರಾ ಕ್ಕೆ ಹೋಗಲು ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಬಹ್ರೈನ್ ಕನ್ನಡ ಸಂಘ ಕಲ್ಪಿಸಿದೆ.