27 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆ
ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) 60 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.
ಎಸ್‌ಡಿಪಿಐ ತನ್ನ ಮೊದಲ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕ್ಷೇತ್ರಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.
ಮೊದಲ ಪಟ್ಟಿಯ ಕ್ಷೇತ್ರಗಳಾದ
ಪಶ್ಚಿಮ ಬಂಗಾಳದ, ಜಂಗೀಪುರ, ಬೆಹರಾಂಪುರ್, ಮುರ್ಷಿದಾಬಾದ್, ಮಾಲ್ಡಾ ದಕ್ಷಿಣ, ಜಾಧವ್ ಪುರ, ಕಲ್ಕತ್ತಾ ಉತ್ತರ, ಕಲ್ಕತ್ತಾ ದಕ್ಷಿಣ
ಉತ್ತರ ಪ್ರದೇಶದ ಕೆರನಾ, ಮೀರತ್, ಬಿಂಜೋರ್, ಕೈಸರ್‌ಗಂಜ್, ಅಮ್ರೋಹಾ, ಲಖನೌ
ಆಂಧ್ರಪ್ರದೇಶದ ನಂದ್ಯಾಲ್, ನೆಲ್ಲೂರ್, ಕರ್ನೂಲ್,
ಮಧ್ಯಪ್ರದೇಶದ ದೇವಸ್, ಭೋಪಾಲ್
ಗುಜರಾತಿನ ಸೂರತ್, ಬನಸ್ಕಾಂತ, ಅಹ್ಮದಾಬಾದ್ ಪಶ್ಚಿಮ, ಕಛ್
ಜಾರ್ಖಂಡ್ ನ ಹಜಾರಿಭಾಗ್, ರಾಜ್ ಮಹಲ್
ಮಹಾರಾಷ್ಟ್ರದ ಮುಂಬಯಿ ದಕ್ಷಿಣ, ಮುಂಬಯಿ ಕೇಂದ್ರ, ಔರಂಗಬಾದ್, ಮಲೆಂಗಾವ್
ಲೋಕಸಭೆ ಚುನಾವಣೆಗೆ ಪಕ್ಷವು ತಳಮಟ್ಟದಲ್ಲಿ ತೀವ್ರ ಸಿದ್ಧತೆ ನಡೆಸುತ್ತಿದೆ. ಎರಡನೇ ಪಟ್ಟಿಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಬಿಹಾರದ ಕ್ಷೇತ್ರಗಳ ಹೆಸರುಗಳು ಇರಲಿದ್ದು, ಮಾರ್ಚ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು. ಆದಷ್ಟು ಬೇಗ ಆಯಾ ರಾಜ್ಯಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.