Home ಟಾಪ್ ಸುದ್ದಿಗಳು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129ರ ತಿದ್ದುಪಡಿ: ಚಿಕ್ಕ ಮಕ್ಕಳನ್ನು ದ್ವಿಚಕ್ರವಾಹನದಲ್ಲಿ ಕರೆದೊಯ್ಯುವಾಗ ಪಾಲಿಸಬೇಕಾಗಿದೆ ಬಿಗಿ...

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129ರ ತಿದ್ದುಪಡಿ: ಚಿಕ್ಕ ಮಕ್ಕಳನ್ನು ದ್ವಿಚಕ್ರವಾಹನದಲ್ಲಿ ಕರೆದೊಯ್ಯುವಾಗ ಪಾಲಿಸಬೇಕಾಗಿದೆ ಬಿಗಿ ನಿಯಮ

ನವದೆಹಲಿ: ದ್ವಿಚಕ್ರ ವಾಹನ ಸವಾರಿ ವೇಳೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ರೀತಿ ಪ್ರಕರಣಗಳಲ್ಲಿ ಮಕ್ಕಳು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ಹಲವು ಪ್ರಕರಣಗಳು ಸಾವಿನಲ್ಲಿ ಅಂತ್ಯಗೊಂಡಿದೆ. ಹೀಗಾಗಿ ವಯಸ್ಕರ ಪ್ರಯಾಣ ಸುರಕ್ಷತೆ ಜೊತೆಗೆ ಮಕ್ಕಳ ಪ್ರಯಾಣದ ಸುರಕ್ಷತೆ ಹೆಚ್ಚಿಸಲು ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದೆ.

4 ವರ್ಷದೊಳಗಿನ ಮಕ್ಕಳನ್ನು ಬೈಕ್ ಅಥವೂ ಸ್ಕೂಟರ್‌ನಲ್ಲಿ ಕರೆದೊಯ್ಯುವಾಗಿ ಹೊಸ ನಿಯಮ ಪಾಲಿಸಲೇಬೇಕಾಗಿದೆ. ನಿಯಮ ಉಲ್ಲಂಘಿಸಿದರೆ ದುಬಾರಿ ಕಂಡ ಕಟ್ಟಬೇಕಾಗಿದೆ.

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129ರ ತಿದ್ದುಪಡಿಯ ಪ್ರಕಾರ 4 ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವಾಗ ವಾಹನದ ವೇಗ ಗಂಟೆಗೆ 40 ಕಿ.ಮೀ ಮೀರುವಂತಿಲ್ಲ. ಒಂದು ವೇಳೆ 40 ಕಿ.ಮೀ ವೇಗಗಕ್ಕಿಂತ ಹೆಚ್ಚಿದ್ದರೆ ಮೋಟಾರು ವಾಹನ ನಿಯಮ ಉಲ್ಲಂಘನೆಗಾಗಿ ದುಬಾರಿ ದಂಡ ಪಾವತಿಸಬೇಕಾಗುತ್ತದೆ.

ಅಲ್ಲದೆ, 4 ವರ್ಷದೊಳಗಿನ ಮಕ್ಕಳೊಂದಿಗೆ ಬೈಕ್ ಅಥವಾ ಸ್ಕೂಟರ್‌ ಗಳಲ್ಲಿ ಹೋಗುವಾಗ ಮಕ್ಕಳು ಕೂಡ ಹೆಲ್ಮೆಟ್ ಖಡ್ಡಾಯವಾಗಿ ಧರಿಸಬೇಕು. ಈ ಹೆಲ್ಮೆಟ್ ಅಥವಾ ಯುರೋಪಿಯನ್ (CEN) BS EN 1080/BS EN 1078 ಸ್ಟಾಂಡರ್ಡ್ ಹೆಲ್ಮೆಟ್ ಆಗಿರಬೇಕು.

ತಿದ್ದುಪಡಿಯಲ್ಲಿರುವ ಮತ್ತೊಂದು ಕಠಿಣ ನಿಯಮದ ಪ್ರಕಾರ ಬೈಕ್ ಸವಾರ ಹಾಗೂ ಹಿಂಬದಿಯ ಮಗುವನ್ನು ಬೈಕ್ ಸವಾರನ ಜೊತೆ ಕಟ್ಟುವ ಬೆಲ್ಟ್ ರೀತಿಯ ಸುರಕ್ಷತಾ ಸಾಧನ ಇರಬೇಕು. ಈ ಸುರಕ್ಷಾ ಸಾಧನದಿಂದ ಮಗುವಿನ ಬೆಲ್ಟ್ ರೀತಿಯಲ್ಲಿ ಹಾಕಿ ಈ ಬೆಲ್ಟನ್ನು ಬೈಕ್ ಸವಾರನಿಗೆ ಜೋಡಿಸುವಂತಿರಬೇಕು. ಇದು ಹೊಂದಾಣಿಕೆ ಮಾಡುವಂತಿರಬೇಕು, ಸೊಂಟಪಟ್ಟಿ ಹಾಗೂ ಭುಜಕ್ಕೆ ಜೋಡಿಸುವ ಎರಡು ಪಟ್ಟಿಗಳನ್ನು ಹೊಂದಿರಬೇಕು. ಈ ಸುರಕ್ಷತಾ ಸಾಧನದಿಂದ ಮಗುವಿನ ದೇಹ ಬೈಕ್ ಸವಾರನ ಜೊತೆ ಭದ್ರವಾಗಿ ಅಂಟಿಕೊಳ್ಳಬೇಕು. ಮಗು ಕೈಬಿಟ್ಟರು, ನಿದ್ರಿಸಿದರು ಬೈಕ್ ಸವಾರನ ಬೆನ್ನಿಗೆ ಹೊಂದಿಕೊಂಡು ಭದ್ರವಾಗಿರಬೇಕು. ಇದರ ಜೊತೆಗೆ ರೈಡಿಂಗ್ ಗೇರ್ ಅಂದರೆ ವಯಸ್ಕರು ಹಾಕಿಕೊಳ್ಳುವ ನೀ ಪ್ಯಾಡ್ ಸೇರಿದಂತೆ ಮಕ್ಕಳ ಸುರಕ್ಷತಾ ಸಾಧನಗಳು ಇರಬೇಕು.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 2019ರಲ್ಲಿ 11,168 ಮಕ್ಕಳು ರಸ್ತೆ ಅಪಘಾತದಲ್ಲಿ ಮರಣಿಸಿದ್ದಾರೆ. ಸರಾಸರಿ ನೋಡಿದರೆ ಪ್ರತಿ ದಿನ 31 ಮಕ್ಕಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಕಾಳಜಿವಹಿಸುವ ಅಗತ್ಯವಿದೆ ಅನ್ನೋ ಕೂಗು ಹಿಂದಿನಿಂದಲೂ ಇದೆ. ಇದೀಗ ಸರಕಾರ ಸಂಬಂಧವಾಗಿ ಬಿಗಿನಿಯಮ ಮಾಡಿದೆ.

Join Whatsapp
Exit mobile version