Home ಟಾಪ್ ಸುದ್ದಿಗಳು ಮಗನ ಕಾಲೇಜು ಶುಲ್ಕದ ಆಸೆಗಾಗಿ ಚಲಿಸುತ್ತಿದ್ದ ಬಸ್ಸಿನ ಮುಂದೆ ಹಾರಿ ಮೃತಪಟ್ಟ ತಾಯಿ!

ಮಗನ ಕಾಲೇಜು ಶುಲ್ಕದ ಆಸೆಗಾಗಿ ಚಲಿಸುತ್ತಿದ್ದ ಬಸ್ಸಿನ ಮುಂದೆ ಹಾರಿ ಮೃತಪಟ್ಟ ತಾಯಿ!

ಚೆನ್ನೈ: ಮಹಿಳೆಯೊಬ್ಬರು ತಾನು ಸತ್ತರೆ ಮಗನ ಕಾಲೇಜು ಶುಲ್ಕವನ್ನು ಸರ್ಕಾರ ಭರಿಸುತ್ತದೆ ಎಂದು ಚಲಿಸುತ್ತಿರುವ ಬಸ್ಸಿನ ಮುಂದೆ ಹಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಪಾಪತಿ(45) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಮಹಿಳೆಯು ಕಳೆದ 15 ವರ್ಷದಿಂದ ಗಂಡನಿಂದ ದೂರವಾಗಿ ಕಷ್ಟಪಟ್ಟು ಮಗನನ್ನು ಸಾಕಿ ಬೆಳೆಸಿದ್ದು, ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಪಾಪತಿ ಖಿನ್ನತೆಗೆ ಒಳಗಾಗಿದ್ದರು.

ಈ ವೇಳೆ ಯಾರೋ ಒಬ್ಬರು ಪಾಪತಿಯ ಬಳಿ ನೀನು ಅಪಘಾತದಲ್ಲಿ ಸತ್ತರೆ ನಿನ್ನ ಮಗನ ಕಾಲೇಜು ಶುಲ್ಕದೊಂದಿಗೆ, ಆತನ ಭವಿಷ್ಯವನ್ನು ಸರ್ಕಾರ ನೋಡಿಕೊಳ್ಳುತ್ತದೆ ಎಂದಿದ್ದರು.

ಈ ಮಾತನ್ನು ನಿಜವೆಂದು ನಂಬಿದ ಮಹಿಳೆ ಚಲಿಸುತ್ತಿರುವ ಬಸ್ಸಿನ ಮುಂದೆ ಹೋಗಿ ನಿಂತಿದ್ದಾರೆ. ವೇಗವಾಗಿ ಬರುತ್ತಿದ್ದ ಬಸ್‌ ಪಾಪತಿ ಅವರ ಮೇಲೆ ಹರಿದಿದೆ.

Join Whatsapp
Exit mobile version