ಕೈರೊ: ಅಕ್ಟೋಬರ್ 7ರಿಂದ ಇಲ್ಲಿಯವರೆಗೆ ಗಾಝಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 50 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.
- Advertisement -
50,021 ಪ್ಯಾಲೆಸ್ಟೀನಿಯರು ಮೃತಪಟ್ಟರೆ, 1,13,274 ಮಂದಿ ಯುದ್ಧದಲ್ಲಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಶನಿವಾರ(ಮಾ.22) ರಾತ್ರಿ ನಡೆಸಿದ ದಾಳಿಯಲ್ಲಿ ಹಮಾಸ್ ಸಂಘಟನೆಯ ನಾಯಕ ಸಲಾಹ್ ಬರ್ದಾವಿಲ್ ಸೇರಿದಂತೆ 19 ಮಂದಿ ಮೃತಪಟ್ಟಿದ್ದರು.
- Advertisement -
ಹಮಾಸ್ ಜೊತೆಗಿನ ಕದನವಿರಾಮ ಕೊನೆಗೊಳಿಸಿದ್ದ ಇಸ್ರೇಲ್ ಕಳೆದ ವಾರ ನಡೆಸಿದ ದಾಳಿಯಲ್ಲಿ ನೂರಾರು ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದರು.
ಇಸ್ರೇಲ್–ಹಮಾಸ್ ನಡುವೆ ಸಂಪೂರ್ಣ ಕದನವಿರಾಮ ಘೋಷಿಸುವ ಇಲ್ಲಿಯವರೆಗಿನ ಎಲ್ಲ ಪ್ರಯತ್ನಗಳು ವಿಫಲವಾಗಿವೆ.