Home ಟಾಪ್ ಸುದ್ದಿಗಳು 4,000ಕ್ಕೂ ಹೆಚ್ಚು ಕೈದಿಗಳು ಜೈಲಿಂದ ಪರಾರಿ: ತುರ್ತು ಪರಿಸ್ಥಿತಿ ಘೋಷಿಸಿದ ಹೈಟಿ ಸರ್ಕಾರ

4,000ಕ್ಕೂ ಹೆಚ್ಚು ಕೈದಿಗಳು ಜೈಲಿಂದ ಪರಾರಿ: ತುರ್ತು ಪರಿಸ್ಥಿತಿ ಘೋಷಿಸಿದ ಹೈಟಿ ಸರ್ಕಾರ

ಪೋರ್ಟ್-ಔ-ಪ್ರಿನ್ಸ್: ಹೈಟಿಯಲ್ಲಿ ವಾರಾಂತ್ಯದಲ್ಲಿ ಹಿಂಸಾಚಾರದ ಬಳಿಕ ತುರ್ತು ಪರಿಸ್ಥಿತಿಯನ್ನ ಘೋಷಿಸಲಾಗಿದೆ. ದೇಶದ ಎರಡು ದೊಡ್ಡ ಜೈಲುಗಳ ಮೇಲಿನ ದಾಳಿಯ ಬಳಿಕ ಸಾವಿರಾರು ಕೈದಿಗಳು ತಪ್ಪಿಸಿಕೊಂಡ ಹಿನ್ನೆಯಲ್ಲಿ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದೆ.

ದಾಳಿಯಿಂದ ತಪ್ಪಿಸಿಕೊಂಡ ಕೊಲೆಗಾರರು, ಅಪಹರಣಕಾರರು ಮತ್ತು ಇತರ ಹಿಂಸಾತ್ಮಕ ಅಪರಾಧಿಗಳನ್ನ ಪತ್ತೆ ಹಚ್ಚುವ ಸರ್ಕಾರದ ಪ್ರಯತ್ನಗಳ ಭಾಗವಾಗಿ 72 ಗಂಟೆಗಳ ತುರ್ತು ಪರಿಸ್ಥಿತಿ ತಕ್ಷಣ ಜಾರಿಗೆ ತರಲಾಗಿದೆ.

ಸಶಸ್ತ್ರ ಪಡೆಗಳು ಪೋರ್ಟ್ ಔ ಪ್ರಿನ್ಸ್ ಜೈಲಿನ ಮೇಲೆ ದಾಳಿ ಮಾಡಿದ ನಂತರ, ಕೈದಿಗಳು ತಪ್ಪಿಸಿಕೊಂಡಿದ್ದಾರೆ.

ಹಿಂಸಾಚಾರದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಸುಮಾರು ನಾಲ್ಕು ಸಾವಿರ ಕೈದಿಗಳು ಪರಾರಿಯಾಗಿದ್ದಾರೆ.

ಸಶಸ್ತ್ರ ಪಡೆಗಳು ಪ್ರಧಾನಿ ಏರಿಯಲ್ ಹೆನ್ರಿ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಹೈಟಿಯಲ್ಲಿ 2020 ರಿಂದ ಗುಂಪು ಹಿಂಸಾಚಾರದಿಂದ ಸಾವಿರಾರು ಸಾವುಗಳು ಸಂಭವಿಸಿವೆ. ಬಂದೂಕುಧಾರಿಗಳು ರಾಜಧಾನಿಯ ಎರಡು ಜೈಲುಗಳ ಮೇಲೆ ಮತ್ತು ಹತ್ತಿರದ ಕ್ರೊಯಿಕ್ಸ್ ಡಿ ಬೊಕ್‌ನಲ್ಲಿ ದಾಳಿ ಮಾಡಿದ್ದಾರೆ.

ಹೈಟಿ ಹಿಸ್ಪಾನಿಯೋಲಾ ದ್ವೀಪದಲ್ಲಿರುವ ಒಂದು ದೇಶವಾಗಿದೆ.

Join Whatsapp
Exit mobile version