Home ಟಾಪ್ ಸುದ್ದಿಗಳು ನಾನು ಐದು ಪೈಸೆ ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ನಾನು ಐದು ಪೈಸೆ ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಬೆಂಗಳೂರು: ಗುತ್ತಿಗೆದಾರರ ಬಿಲ್‌ ಪಾವತಿಸಲು ನೀಡುವ ಯಾವುದೇ ಎಲ್‌ಒಸಿಗೆ ನಾನು ಐದು ಪೈಸೆ ಪಡೆದಿದ್ದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ನಗರದಲ್ಲಿ ರಾಜ್ಯ ಗುತ್ತಿಗೆದಾರರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಸರ್ಕಾರ 40 ಪರ್ಸೆಂಟ್‌ ಲಂಚ ಪಡೆಯುತ್ತಿದ್ದ ಬಗ್ಗೆ ತನಿಖೆ ನಡೆಸಲು ನ್ಯಾ. ನಾಗಮೋಹನದಾಸ್ ಸಮಿತಿ ನೇಮಕ ಮಾಡಲಾಗಿದೆ. ಸಮಿತಿ ತನಿಖೆ ನಡೆಸುತ್ತಿದೆ ಎಂದ ಸಿಎಂ, ನಮ್ಮ ಸರ್ಕಾರದಲ್ಲಿಯೂ ಈ ರೀತಿ ಲಂಚ ಪಡೆಯುತ್ತಿದ್ದರೆ ಈ ಸಮಿತಿಗೆ ದೂರು ಸಲ್ಲಿಸಿ ಎಂದು ಸಲಹೆ ನೀಡಿದರು.

ನಾನು ಕಳೆದ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗುತ್ತಿಗೆದಾರರ ಯಾವ ಬಿಲ್‌ ಕೂಡ ಉಳಿಸಿಕೊಂಡಿರಲಿಲ್ಲ. ಬಿಜೆಪಿ ಆಡಳಿತಕ್ಕೆ ಬಂದಾಗ ಅವರು ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲದೇ ಇದ್ದರೂ ಹಣಕಾಸು ಆಯೋಗ ಒಪ್ಪದೇ ಇದ್ದರೂ ಅನೇಕ ಟೆಂಡರ್‌ಗಳನ್ನು ಕರೆದಿದ್ದರಿಂದ ಈ ಸಮಸ್ಯೆ ಉಂಟಾಗಿದೆ ಎಂದಿದ್ದಾರೆ.

ನೀವು ಯಾಕೆ ಕಾಮಗಾರಿ ನಡೆಸಲು ಒಪ್ಪಿಕೊಂಡ್ರಿ. ನಾನೇ ಹೇಳಿದರೂ ಕಾಮಗಾರಿಯ ಒಟ್ಟು ವೆಚ್ಚದ 3ನೇ 1 ಭಾಗದಷ್ಟು ಹಣ ತೆಗೆದಿರಿಸದ ಕಾಮಗಾರಿಗಳನ್ನು ನೀವು ಒಪ್ಪಿಕೊಳ್ಳಬೇಡಿ. ಒಪ್ಪಿಕೊಂಡರೆ ಹಿಂದಿನ ಸರ್ಕಾರದಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಂತೆ ಮುಂದೆಯೂ ಸಂಕಷ್ಟಕ್ಕೆ ಸಿಲುಕುತ್ತೀರಿ ಎಂದು ಸಿದ್ದರಾಮಯ್ಯ ಗುತ್ತಿಗೆದಾರರನ್ನು ಎಚ್ಚರಿಸಿದರು.

Join Whatsapp
Exit mobile version