Home ಟಾಪ್ ಸುದ್ದಿಗಳು ಭಾರತದಲ್ಲೂ ಟ್ವಿಟ್ಟರ್ ಬ್ಲೂ ಟಿಕ್’ಗೆ ಮಾಸಿಕ ಶುಲ್ಕ: ಎಲಾನ್ ಮಸ್ಕ್

ಭಾರತದಲ್ಲೂ ಟ್ವಿಟ್ಟರ್ ಬ್ಲೂ ಟಿಕ್’ಗೆ ಮಾಸಿಕ ಶುಲ್ಕ: ಎಲಾನ್ ಮಸ್ಕ್

ನವದೆಹಲಿ: ಟ್ವಿಟ್ಟರ್’ನ ಅಧಿಕೃತ ಖಾತೆಗಳನ್ನು ಪತ್ತೆಹಚ್ಚುವಂತಾಗಲು ಉಪಯೋಗಿಸುವ ಬ್ಲೂ ಟಿಕ್ ಪಡೆಯಲು ಇನ್ನು ಮುಂದಕ್ಕೆ ಮಾಸಿಕ 8 ಡಾಲರ್ ಶುಲ್ಕ ವಿಧಿಸಲಾಗುವುದು ಎಂದು ಟ್ವಿಟ್ಟರ್’ನ ನೂತನ ಮಾಲಕ, ಸಿಇಒ ಎಲಾನ್ ಮಸ್ಕ್ ಇತ್ತೀಚೆಗೆ ಹೇಳಿಕೆ ನೀಡಿದ್ದು, ಹಲವು ದೇಶಗಳಲ್ಲಿ ಬ್ಲೂ ಟಿಕ್’ನ ಶುಲ್ಕ ನಿಯಮವು ಇಂದಿನಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಭಾರತಕ್ಕೂ ಈ ನಿಯಮ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಟ್ವಿಟ್ಟರ್ ಬ್ಲೂ ಟಿಕ್ ಮೇಲೆ ಹೇರಲಾಗಿದ್ದ ಶುಲ್ಕ ನೀತಿ ಭಾರತದ ಐಟಿ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆಯೇ? ನೂತನ ಐಟಿ ನಿಯಮಗಳಲ್ಲಿ ಸಾಮಾಜಿಕ ಮಾಧ್ಯಮಗಳು ಬ್ಲೂ ಟಿಕ್’ಗೆ ಶುಲ್ಕ ಪಡೆಯಲು ಅವಕಾಶವಿದೆಯೇ ಎಂಬುವುದರ ಕುರಿತು ಚರ್ಚೆಗೆ ಪೂರ್ಣವಿರಾಮ ಹಾಕಿದ ಬಳಕೆದಾರರೋರ್ವರಾದ ಪ್ರಭು, ಭಾರತದಲ್ಲಿಯೂ ನೂತನ ಬ್ಲೂ ಟಿಕೆ ನಿಯಮ ಯಾವಾಗ ಜಾರಿಯಾಗಲಿದೆ ಎಂದು ಎಲಾನ್ ಮಸ್ಕ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್, ಒಂದು ತಿಂಗಳೊಳಗಾಗಿ ಈ ನಿಯಮ ಜಾರಿಗೆ ಬರಲಿದೆ ಎಂಬ ಭರವಸೆಯನ್ನು ನೀಡಬಲ್ಲೆ ಎಂದು ತಿಳಿಸಿದ್ದಾರೆ.

ಅಮೆರಿಕದಲ್ಲಿ ಬ್ಲೂಟಿಕ್’ಗೆ 7.99 ಡಾಲರ್ ಶುಲ್ಕ ವಿಧಿಸಿದ ಸಂಸ್ಥೆ

ಅಮೆರಿಕದಲ್ಲಿ ಬ್ಲೂಟಿಕ್’ಗೆ ಮಾಸಿಕ 7.99 ಡಾಲರ್ ಶುಲ್ಕ ವಿಧಿಸಲಾಗುತ್ತಿದೆ. ಐಒಎಸ್ ಬಳಕೆದಾರರಿಗೆ ಆ್ಯಪ್ ನ ಅಪ್ಡೇಟೆಡ್ ವರ್ಷನ್ ಬಳಕೆಗೆ ಅವಕಾಶ ಲಭಿಸಿದೆ. ಆದರೆ ಹೊಸ ಆಯ್ಕೆ ಇನ್ನೂ ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗಿಲ್ಲ ಎಂದು ಹೇಳಲಾಗಿದೆ. ಭಾರತದಲ್ಲಿ ಬ್ಲೂಟಿಕ್’ಗೆ ಮಾಸಿಕ 200 ರೂ. ಶುಲ್ಕ ವಿಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Join Whatsapp
Exit mobile version