Home ಟಾಪ್ ಸುದ್ದಿಗಳು ಅಕ್ರಮ ಪ್ರಕರಣ: ಮನೀಶ್ ಸಿಸೋಡಿಯಾ ಅವರ ಇಡಿ ಕಸ್ಟಡಿ ಮತ್ತೆ 5 ದಿನ ವಿಸ್ತರಣೆ

ಅಕ್ರಮ ಪ್ರಕರಣ: ಮನೀಶ್ ಸಿಸೋಡಿಯಾ ಅವರ ಇಡಿ ಕಸ್ಟಡಿ ಮತ್ತೆ 5 ದಿನ ವಿಸ್ತರಣೆ

ದೆಹಲಿ: ದೆಹಲಿ ಮದ್ಯ ನೀತಿ ಅಕ್ರಮ ಪ್ರಕರಣ ವಿಚಾರವಾಗಿ ಬಂಧಿಸಲ್ಪಟ್ಟಿದ್ದ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಇಡಿ ಕಸ್ಟಡಿಯನ್ನು ಮತ್ತೆ ಐದು ದಿನಗಳ ಕಾಲ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.


ಸಿಸೋಡಿಯಾ ಅವರ ಏಳು ದಿನಗಳ ಇಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇನ್ನೂ ವಿಚಾರಣೆ ನಡೆಸಲು ಬಾಕಿ ಇರುವುದರಿಂದ ಏಳು ದಿನ ಕಸ್ಟಡಿಯನ್ನು ಏಜೆನ್ಸಿ ಕೋರಿತ್ತು. ಈ ಹಿನ್ನೆಯಲ್ಲಿ ಮತ್ತೆ ಐದು ದಿನಗಳ ಕಾಲ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.


ಭ್ರಷ್ಟಾಚಾರದ ಆರೋಪದ ಮೇಲೆ ಸಿಬಿಐನಿಂದ ಬಂಧಿಸಲ್ಪಟ್ಟ ಮನೀಶ್ ಸಿಸೋಡಿಯಾ ಫೆಬ್ರವರಿ 26 ರಿಂದ ಜೈಲಿನಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

Join Whatsapp
Exit mobile version