Home ಟಾಪ್ ಸುದ್ದಿಗಳು ಸೆಲ್ಫಿ, ನೆಟ್ಟಿಗರ ಕಾಟ: ಕುಂಭಮೇಳ ತೊರೆದ ಮೊನಾಲಿಸಾ..!

ಸೆಲ್ಫಿ, ನೆಟ್ಟಿಗರ ಕಾಟ: ಕುಂಭಮೇಳ ತೊರೆದ ಮೊನಾಲಿಸಾ..!

ಪ್ರಯಾಗ್‌ ರಾಜ್: ಮಹಾಕುಂಭ ಮೇಳದಲ್ಲಿ ಸುಂದರ ಕಣ್ಣಿನ ಮೊನಾಲಿಸಾ ಎಂಬ ಹುಡುಗಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದಳು. ಆದರೆ ಸದ್ಯ ಇದೀಗ ಆಕೆ ಕುಂಭಮೇಳದಿಂದ ಹೊರನಡೆದಿದ್ದಾಳೆ.

ಜ.13ರಿಂದ ಪ್ರಾರಂಭವಾಗಿರುವ ಮಹಾಕುಂಭಮೇಳದಲ್ಲಿ ದೇಶ- ವಿದೇಶದಿಂದ ಕೋಟ್ಯಂತರ ಜನರು ಬರುತ್ತಿದ್ದಾರೆ. ಜೊತೆಗೆ ಕುಂಭಮೇಳದಲ್ಲಿ ವಿಭಿನ್ನ ರೀತಿಯಲ್ಲಿ ಹಲವರು ಗುರುತಿಸಿಕೊಳ್ಳುತ್ತಿದ್ದಾರೆ. ಆ ಪೈಕಿ ರುದ್ರಾಕ್ಷಿ ಮಾರುವ ಹುಡುಗಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಳು.

ಮೂಲತಃ ಇಂದೋರ್‌ ನವಳಾದ ಈಕೆಯ ಹೆಸರು ಮೊನಾಲಿಸಾ ಭೋಸ್ಲೆ, ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದಳು. ತನ್ನ ಸುಂದರ ಕಣ್ಣು, ನಗು ಹಾಗೂ ಮುಗ್ಧ ಸ್ವಭಾವವದಿಂದ ಎಲ್ಲರ ಹೃದಯ ಕದ್ದಿದ್ದಳು. ಇದರಿಂದ ರಾತ್ರೋರಾತ್ರಿ ಫೇಮಸ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ಆಕೆಯೊಂದಿಗಿನ ಸೆಲ್ಫಿ, ಅವಳ ವಿಡಿಯೋಗಳು ಹರಿದಾಡುತ್ತಿದ್ದವು.

ಇದನ್ನು ಕಂಡ ಆಕೆಯ ತಂದೆ ಬೇಸರಗೊಂಡಿದ್ದು, ರುದ್ರಾಕ್ಷಿ ಮಾರಾಟದಲ್ಲಿ ಕುಸಿತವಾಗಿದೆ. ಇನ್ನೂ ಇಂಟರ್ನೆಟ್‌ ನಲ್ಲಿ ಮಗಳ ವಿಡಿಯೋಗಳೇ ಹರಿದಾಡುತ್ತಿದೆ ಎಂದು ಆಕೆಯನ್ನು ಇಂದೋರ್‌ ಗೆ ಕಳಿಸಿದ್ದಾರೆ.

Join Whatsapp
Exit mobile version