ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಮೂಡಬಿದ್ರೆಯ ಮೊಹಮ್ಮದ್ ಶಕೀರ್’ಗೆ ಎರಡು ಚಿನ್ನದ ಪದಕ

Prasthutha|

ಮೂಡಬಿದಿರೆ: ಮಂಗಳೂರಿನ ಶೌರ್ಯ ಹಾಗೂ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ – ಮಂಗಳೂರು ಡೋಜೋ ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಮೊಹಮ್ಮದ್ ಶಕೀರ್ ಎರಡು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

- Advertisement -

ಬ್ಲಾಕ್ ಬೆಲ್ಟ್  -75 ಕೆಜಿ ವಿಭಾಗದಲ್ಲಿ ಕುಮಿತೆ (ಫೈಟಿಂಗ್) ಚಿನ್ನದ ಪದಕ ಹಾಗೂ ಕಟ (ಫಾರ್ಮ್ಸ್) ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡು ಬೆಸ್ಟ್ ಫೈಟರ್ ಆಗಿ ಹೊರ ಹೊಮ್ಮಿದ್ದಾರೆ.

ಇವರು ಮೂಡುಬಿದ್ರಿಯಾ ರೆನ್ಶಿ ನದೀಮ್ ಹಾಗೂ ಶಿಯನ್  ಸರ್ಫ್ರಾಜ್ ಇವರ ಶಿಷ್ಯರಾಗಿದ್ದು, ಶೋರಿನ್ ರ್ಯೂ ತಂಡದ ಸಹ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

- Advertisement -

ಹಂಡೇಲಿನ ನಿವಾಸಿಯಾದ ಮೊಹಮ್ಮದ್ ಸಲೀಂ ಹಾಗೂ ರಹಮತ್ ದಂಪತಿಯ ಪುತ್ರ.



Join Whatsapp
Exit mobile version