ಬಿಹಾರ: ಗುಂಡು ಹಾರಿಸಿ ಬಿಜೆಪಿ ನಾಯಕನ ಹತ್ಯೆ

Prasthutha|

ಪಾಟ್ನಾ: ಗುಂಡು ಹಾರಿಸಿ ಬಿಜೆಪಿ ನಾಯಕನ ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

- Advertisement -

ಪಾಟ್ನಾದಲ್ಲಿ ಸೋಮವಾರ ಮುಂಜಾನೆ ದುಷ್ಕರ್ಮಿಗಳು ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

ಮೃತರನ್ನು ಬಿಜೆಪಿ ಮುಖಂಡ ಶ್ಯಾಮ್ ಸುಂದರ್ ಅಲಿಯಾಸ್ ಮುನ್ನಾ ಶರ್ಮಾ ಎಂದು ಗುರುತಿಸಲಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

- Advertisement -

ಶ್ಯಾಮ್ ಸುಂದರ್ ಮನೋಜ್ ಕಮಾಲಿಯಾ ಗೇಟ್ ಬಳಿ ಬಂದಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಶ್ಯಾಮ್ ಸುಂದರ್ ಬಿಜೆಪಿಯಿಂದ ಪಾಟ್ನಾ ಸಿಟಿ ಚೌಕ್‌ನ ಮಾಜಿ ಮುನ್ಸಿಪಲ್ ಬೋರ್ಡ್ ಅಧ್ಯಕ್ಷರಾಗಿದ್ದರು.



Join Whatsapp
Exit mobile version