Home ಟಾಪ್ ಸುದ್ದಿಗಳು ಟೀಂ ಇಂಡಿಯಾ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಕಾರು ಅಪಘಾತ

ಟೀಂ ಇಂಡಿಯಾ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಕಾರು ಅಪಘಾತ

ಚೈಪುರ್ : ಲಾಲ್ಸೋಟ್ ಕೋಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಕಾರು ಅಪಘಾತವಾಗಿದೆ. ಅಪಘಾತದಲ್ಲಿ ಸಿಲುಕಿದ ಅಝರುದ್ದೀನ್ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜಸ್ಥಾನದ ಸುರ್ವಾಲದಲ್ಲಿ ಈ ಘಟನೆ ನಡೆದಿದೆ.

ಈ ಕುರಿತಂತೆ ಅಝರುದ್ದೀನ್ ಆಪ್ತ ಸಹಾಯಕ ಮಾಹಿತಿ ಹಂಚಿಕೊಂಡಿದ್ದು, ರಾಜಸ್ಥಾನದ ಸುರ್ವಾಲ ಹತ್ತಿರದ ಲಾಲ್ಸೋಟ್ ಕೋಟಾ ಹೈವೇನಲ್ಲಿ ಮುಹಮ್ಮದ್ ಅಝಝದ್ದೀನ್ ಕುಟುಂಬದೊಂದಿಗೆ ರಣಥಂಬೋರ್ ಗೆ ಆಗಮಿಸುತ್ತಿದ್ದಾಗ ಕಾರು ಅಪಘಾತಗೊಂಡಿದೆ. ಅವರು, ಅವರ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version