Home ಟಾಪ್ ಸುದ್ದಿಗಳು ಒಂದು ಸಮುದಾಯದ ಮೇಲೆ ದ್ವೇಷ ಕಾರಿರುವುದೇ ಮೋದಿಯ ಸಾಧನೆ: ಬಿ.ಕೆ. ಹರಿಪ್ರಸಾದ್

ಒಂದು ಸಮುದಾಯದ ಮೇಲೆ ದ್ವೇಷ ಕಾರಿರುವುದೇ ಮೋದಿಯ ಸಾಧನೆ: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ಕಾಂಗ್ರೆಸ್ ನವರು 70 ವರ್ಷದಲ್ಲಿ ಏನು ಕೊಟ್ಟಿಲ್ಲ  ಎಂದು ಬಿಜೆಪಿಯವರು ಹೇಳುತ್ತಾರೆ. ಈ ದೇಶಕ್ಕೆ 21 ಸಾವಿರ ಉದ್ಯೋಗ ಕೊಟ್ಟ, ಎಚ್ ಎಂಟಿ, 71 ಸಾವಿರ ಉದ್ಯೋಗ ಕೊಟ್ಟ ಐಐಟಿ ಸ್ಥಾಪಿಸಿದ್ದು ನಾವು.. ಅವರು ಎಲ್ಲವನ್ನು ಇವರು ಹಾಳು ಮಾಡಿದ್ದಾರೆ. ಒಂದು ಸಮುದಾಯದ ಮೇಲೆ ದ್ವೇಷ ಕಾರುವುದೇ ಮೋದಿಯ ಸಾಧನೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕುರಿತು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೂ ನಮ್ಮ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಕಲ್ಪಿಸಿದ್ದಾರೆ. ಇದುವರೆಗೂ ಹಣವಿದ್ದರೂ ತಾವೇ ನಾಯಕರು ಎಂದು ಹೇಳುತ್ತಿದ್ದರು. ಆದರೆ ಈಗ ಈ ಅಭಿಯಾನದ ಮೂಲಕ ಯಾರು ಹೆಚ್ಚು ಸದಸ್ಯರನ್ನು ನೋಂದಾಯಿಸಿದ್ದಾರೆ ಎಂಬ ಅಂಕಿ ಅಂಶ ಹೈಕಾಮಾಂಡ್ ಬಳಿ ಇರುತ್ತದೆ ಎಂದರು.

ಕಾಂಗ್ರೆಸ್ ಪಕ್ಷ ಎಂದರೆ ಸಾಮಾನ್ಯ ಪಕ್ಷವಲ್ಲ, ರಾಷ್ಟ್ರದ ಪವಿತ್ರವಾದ, ಸ್ವಾತಂತ್ರ್ಯ ತಂದುಕೊಟ್ಟ, ಸಾವಿರಾರು ಜನ ಪ್ರಾಣ ತ್ಯಾಗ ಮಾಡಿ ನಮಗೆ ಕೊಟ್ಟಿರುವ ಪಕ್ಷ. ಕಾಂಗ್ರೆಸ್ ಪಕ್ಷಕ್ಕೆ 135 ವರ್ಷವಾಗಿದೆ. ಬಿಜೆಪಿಯ ನಾಯಕರಿಗೆ ಹಾವಿನಪುರದವರು ಸುಳ್ಳು ಹೇಳಲು ತರಬೇತಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ನಮ್ಮ ದೇಶದ ಏಕತೆಗೆ, ಅಖಂಡತೆಗೆ ಪ್ರಾಣ ತ್ಯಾಗ ಮಾಡಿದವರು ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು. ಬಿಜೆಪಿಯ ಅಪಾಯದಲ್ಲಿ ದೇಶ ಸಿಲುಕಿದಾಗ, ತವು ಪ್ರಧಾನಮಂತ್ರಿ ಆಗುವ ಅವಕಾಶ ಸಿಕ್ಕರೂ ಈ ದೇಶದ ಭವಿಷ್ಯದ ದೃಷ್ಟಿಯಿಂದ ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಮಾಡಿದರು.

ಬಿಜೆಪಿಯವರ ಸುಳ್ಳು, ಅಹಿಂಸೆ ನಡೆಯುತ್ತಾ ಅಥವಾ ಗಾಂಧಿಯ ಸತ್ಯ ನಡೆಯುತ್ತಾ ಎಂದು ತೋರಿಸಬೇಕು. ಬಿಜೆಪಿಯವರು 100 ಬಾರಿ ಸುಳ್ಳು ಹೇಳಿ ನಂಬಿಸುತ್ತಾರೆ. ಆದರೆ ನೀವು ಧೈರ್ಯವಾಗಿ ಒಮ್ಮೆ ನಿಜ ಹೇಳಿ ಆರ್ ಎಸ್ಎಸ್ ನವರು ಹೆದರುತ್ತಾರೆ. ನಿಮ್ಮ ಜತೆ ನಾವೆಲ್ಲ ಇದ್ದೇವೆ. ಅಸ್ಸಾಂ ಮುಖ್ಯಮಂತ್ರಿ ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತಾನೆ. ಅವನಿಗೆ ರಾಹುಲ್ ಗಾಂಧಿ ಅವರ ಮನೆ ಕಾಯುವ ಯೋಗ್ಯತೆ ಇಲ್ಲ. ಈ ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ ಅವರ ಬಗ್ಗೆ ಮಾತನಾಡುತ್ತಾರೆ. ಗಾಂಧಿ ಪರಿವಾರ ಈ ದೇಶಕ್ಕೆ ಕಾಂಗ್ರೆಸ್ ಪಕ್ಷವನ್ನು ಕೊಡುಗೆಯಾಗಿ ನೀಡಿದ್ದು, ಅದನ್ನು ಉಳಿಸಲು ಸೋನಿಯಾ ಗಾಂಧಿ ಅವರು ಹೋರಾಡುತ್ತಿದ್ದಾರೆ. ನಾವು ಅವರಿಗೆ ಬೆಂಬಲವಾಗಿ ಬೆಂಬಲ ನೀಡೋಣ. ಪಕ್ಷವನ್ನು ಕಟ್ಟಲು ಅವಕಾಶ ನೀಡಿದ್ದಾರೆ. ಸದೃಢ ಭಾರತ ನಮಗೆ ನೀಡಿದ್ದಾರೆ  ಎಂದು ಹರಿಪ್ರಸಾದ್ ಹೇಳಿದರು.

ಬಿಜೆಪಿಯ ವಿರುದ್ಧದ ಹೋರಾಟವನ್ನು ನಾವು ಗಂಭೀರವಾಗಿ ತೆಗೆದುಕೊಂಡು ಸದಸ್ಯತ್ವ ಆರಂಭಿಸಬೇಕು. ಪಕ್ಷದ ನಾಯಕರು ಹೆಚ್ಚು ಸದಸ್ಯರನ್ನು ಮಾಡಿದವರಿಗೆ ಪಾಲಿಕೆ ಚುನಾವಣೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ಅದನ್ನು ಮಾಡದಿದ್ದರೆ ನಾನೇ ಹೋರಾಟ ಮಾಡುತ್ತೇನೆ. ಪಾಲಿಕೆಯನ್ನು ತುಂಡು ತುಂಡು ಮಾಡುತ್ತಿದ್ದಾರೆ. ಎಲ್ಲ ಚುನಾವಣೆಗಳಲ್ಲಿ ನೀವು ಒಗ್ಗಟ್ಟಾಗಿ ಕೆಲಸ ಮಾಡಿ. ರಾಜ್ಯದಲ್ಲಿ ಆಗುವ ಸದಸ್ಯತ್ವ ನೋಂದಣಿಯಲ್ಲಿ ಅರ್ಧದಷ್ಟು ಸದಸ್ಯತ್ವ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಗಬೇಕು ಎಂದು ಅವರು ಹೇಳಿದರು.

Join Whatsapp
Exit mobile version