Home ಟಾಪ್ ಸುದ್ದಿಗಳು ಸ್ಮಶಾನದ ಚಿತಾ ಬೆಂಕಿಯೇ ರಾಜ್ಯ ಸರ್ಕಾರದ ಸಾಧನೆಗೆ ಬೆಳಕು ಚೆಲ್ಲಿದೆ: ರಾಜ್ಯಪಾಲರ ಭಾಷಣಕ್ಕೆ ಯು.ಟಿ.ಖಾದರ್ ಟೀಕೆ

ಸ್ಮಶಾನದ ಚಿತಾ ಬೆಂಕಿಯೇ ರಾಜ್ಯ ಸರ್ಕಾರದ ಸಾಧನೆಗೆ ಬೆಳಕು ಚೆಲ್ಲಿದೆ: ರಾಜ್ಯಪಾಲರ ಭಾಷಣಕ್ಕೆ ಯು.ಟಿ.ಖಾದರ್ ಟೀಕೆ

ಬೆಂಗಳೂರು; ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿರುವ ರಾಜ್ಯ ಸರ್ಕಾರ ರಾಜ್ಯಪಾಲರ ಬಾಯಿಯಲ್ಲಿ ಸುಳ್ಳಾಡಿಸಿದೆ ಎಂದು ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಟೀಕಿಸಿದ್ದಾರೆ.

ರಾಜ್ಯಪಾಲರ ಭಾಷಣದಲ್ಲಿ ಹೊಸದೇನೂ ಇಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಕೆಲ ಕಾರ್ಯಕ್ರಮಗಳನ್ನೇ ಮುಂದುವರಿಸಿ ನಮ್ಮ ಸಾಧನೆ ಎಂದು ಹೇಳಿದ್ದಾರೆ. ಕೊರೋನಾ ಕಾಲದಲ್ಲಿ ಸರ್ಕಾರ ವೈಫಲ್ಯ ಕಣ್ಣಿಗೆ ಕಾಣುವಂತಿದೆ. ಇದುವರೆಗೂ ಕೊರೋನಾ ಪೀಡಿತ ಕುಟುಂಬಗಳಿಗೆ ಪರಿಹಾರ ನೀಡಿಲ್ಲ. ರೈತರಿಗೆ ನೀಡುವ ಪರಿಹಾರವಂತೂ ಕನ್ನಡಿಯೊಳಗಿನ ಗಂಟು. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಕೊರೋನಾ ನಿಯಂತ್ರಣದಲ್ಲಿ ಸಾಧನೆ ಮಾಡಿದ್ದು ಎಲ್ಲಿ ಎಂದು ಖಾದರ್ ಪ್ರಶ್ನಿಸಿದರು.

ಸ್ಮಶಾನದ ಚಿತಾ ಬೆಂಕಿಯೇ ಇವರ ಸಾಧನೆಗೆ ಬೆಳಕು ಚೆಲ್ಲಿದ್ದವು. ಬಡವರ ಊಟದ ಖಾಲಿ ತಟ್ಟೆ ಸರ್ಕಾರದ ದಿವಾಳಿತನ ನೋಡಿ ನಗುತ್ತಿದ್ದವು. ವರ್ತಕರ ಗಲ್ಲಾ ಪೆಟ್ಟಿಗೆ ಅವೈಜ್ಞಾನಿಕ ನಿಯಮಗಳ ನೆಪದಲ್ಲಿ ಸರ್ಕಾರವೇ ಮುಂದೆ ನಿಂತು ಬೀಗ ಹಾಕಿಸಿದೆ. ಈಗ ಪರಿಹಾರದ ಮಾತನಾಡುವುದು ಕರುವಿಗೆ ಹಾಲು ತಪ್ಪಿಸಿ ಕೊರಳು ಹಿಡಿರು ಮುದ್ದಾಡಿದಂತೆ ಎಂದು ಖಾದರ್ ವ್ಯಾಖ್ಯಾನಿಸಿದರು.

ನಿರುದ್ಯೋಗದ ಸಮಸ್ಯೆ ಬಗ್ಗೆ ಸರ್ಕಾರದ ಬಳಿ ಯಾವುದೇ ಉತ್ತರವಿಲ್ಲ. ಹಣಕಾಸು , ನಿರಾವರಿ, ಸಮಾಜಿಕ ನ್ಯಾಯದ ಬಗ್ಗೆ ಭಾಷಣದಲ್ಲಿ ಉಲ್ಲೇಖವೇ ಇಲ್ಲ. ಗುರಿಯೇ ಇಲ್ಲದ ಸರ್ಕಾರದ ಭಾಷಣ ನೋಡುತ್ತಿದ್ದರೆ ಕವಲು ದಾರಿಯಲ್ಲಿ ನಿಂತವರಂತಿದೆ. ಮುಂದು ಇಲ್ಲ ಹಿಂದು ಇಲ್ಲದ ಸರ್ಕಾರ ಇದು ಎಂದು ಯು.ಟಿ.ಖಾದರ್ ಟೀಕಾಪ್ರಹಾರ ನಡೆಸಿದ್ದಾರೆ.

Join Whatsapp
Exit mobile version