Home ಟಾಪ್ ಸುದ್ದಿಗಳು ನೀವು ಒಂದೇ ಬಾರಿಗೆ ಎಷ್ಟು ಪುಶ್ ಅಪ್ ಗಳನ್ನು ಮಾಡುತ್ತೀರಿ ಎಂದು ಪ್ರಶ್ನಿಸಿದ ಮೋದಿ

ನೀವು ಒಂದೇ ಬಾರಿಗೆ ಎಷ್ಟು ಪುಶ್ ಅಪ್ ಗಳನ್ನು ಮಾಡುತ್ತೀರಿ ಎಂದು ಪ್ರಶ್ನಿಸಿದ ಮೋದಿ

ಹೊಸದಿಲ್ಲಿ: ನೀವು ಒಂದೇ ಬಾರಿಗೆ ಎಷ್ಟು ಪುಶ್ ಅಪ್ ಗಳನ್ನು ಮಾಡುತ್ತೀರಿ ಎಂದು ಮಣಿಪುರದ ಯುವಕನೊಬ್ಬನಿಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

“ಈಗ ನಾನು ವಿಶೇಷವಾಗಿ ಯುವಕರಿಗೆ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಒಂದೇ ಬಾರಿಗೆ ನೀವು ಎಷ್ಟು ಪುಶ್ ಅಪ್ಗಳನ್ನು ಮಾಡಬಹುದು? ಮಣಿಪುರದಲ್ಲಿ 24 ವರ್ಷದ ಯುವಕ ನಿರಂಜೋಯ್ ಒಂದು ನಿಮಿಷದಲ್ಲಿ 109 ಪುಶ್ ಅಪ್ಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಈ ಹಿಂದೆಯೂ ಒಂದೇ ನಿಮಿಷದಲ್ಲಿ ಒನ್ ಹ್ಯಾಂಡ್ ಕಾಪಿ ಪುಶ್ ಅಪ್ ಮಾಡಿ ದಾಖಲೆ ನಿರ್ಮಿಸಿದ್ದರು. ಈ ವಿಷಯ ಪ್ರಸ್ತಾಪದಿಂದಾಗಿ ನೀವೆಲ್ಲ ನಿರಂಜೋಯ್ ಅವರಿಂದ ಪ್ರೇರಣೆ ಪಡೆಯುತ್ತೀರಿ” ಎಂದು ಪ್ರಧಾನಿ ಹೇಳಿದರು.

Join Whatsapp
Exit mobile version