Home ಟಾಪ್ ಸುದ್ದಿಗಳು ಇಂಜಿನಿಯರಿಂಗ್ ಸೀಟ್ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ

ಇಂಜಿನಿಯರಿಂಗ್ ಸೀಟ್ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ

ಬೆಂಗಳೂರು: ಇಂಜಿನಿಯರಿಂಗ್ ಸೀಟ್ ಕೊಡಿಸುವುದಾಗಿ ವಂಚನೆ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ರಾಜೇಶ್ವರ್ ಬಂಧಿತ ಆರೋಪಿಯಾಗಿದ್ದಾನೆ. ರೇವಾ ಕಾಲೇಜಿನಲ್ಲಿ ಯುವತಿಗೆ ಸೀಟ್ ಕೊಡಿಸುವುದಾಗಿ ಹೇಳಿ 1 ಲಕ್ಷದ 27 ಸಾವಿರ ಹಣ ಪಡೆದು ವಂಚಿಸಿದ್ದರು.

ಯುವತಿ ರೇವಾ ಕಾಲೇಜಿನಲ್ಲಿ ಇಂಜಿನಿಯರಿಂಗ್ ಗೆ ಸೇರಿದ್ದಳು. ಎಸಿಎಂ ಬ್ರಾಂಚ್ ಪಡೆದಿದ್ದ ಕಂಪ್ಯೂಟರ್ ಸೈನ್ಸ್ ಸೀಟ್ಗಾಗಿ ಪ್ರಯತ್ನಿಸುತ್ತಿದ್ದಳು. ಬೇರೆಯವರ ಸೀಟ್ ಕ್ಯಾನ್ಸಲ್ ಆಗಿ ಕಂಪ್ಯೂಟರ್ ಸೈನ್ಸ್ ಸೀಟ್ ಸಿಗಬಹುದಾ ಎಂದು ಕಾಯುತ್ತಿದ್ದಾಗ ಕಂಪ್ಯೂಟರ್ ಸೈನ್ಸ್ ಸೀಟ್ ಕ್ಯಾನ್ಸಲ್ ಆಗಿದೆ ಎಂದು ಯುವತಿ ಮೊಬೈಲ್ ಫೋನ್ಗೆ ಸಂದೇಶ ಬಂದಿತ್ತು.

ಕರೆ ಮಾಡಿ ವಿಚಾರಿಸಿದಾಗ ಆರೋಪಿಗಳು ಹಣ ಕೊಡಲು ಹೇಳಿದ್ದರು. ಅದರಂತೆ ಯುವತಿಯ ತಂದೆ 1.27 ಲಕ್ಷ ರೂ. ನೀಡಿದ್ದರು. ಜನವರಿ 13ರಂದು ಆರೋಪಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದು ಬಳಿಕ ಹಣ ಪಡೆದು ಆರೋಪಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

ಕಾಲೇಜಿನಲ್ಲಿ ವಿಚಾರಿಸಿದಾಗ ಆತ ಕಾಲೇಜು ಸಿಬ್ಬಂದಿ ಅಲ್ಲ ಎನ್ನುವುದು ತಿಳಿದು ಬಂದಿತ್ತು. ಘಟನೆ ಸಂಬಂಧ ಯುವತಿ ತಂದೆ ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆ ಆರೋಪಿ ರಾಜೇಶ್ವರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ 3 ಮೊಬೈಲ್, 4 ಲ್ಯಾಪ್ಟಾಪ್, 7 ಸಿಮ್ ಕಾರ್ಡ್, 21 ಗ್ರಾಂ ಚಿನ್ನದ ಚೈನ್, ಮೂರು ಚಿನ್ನದ ನಾಣ್ಯ, 1 ಲಕ್ಷದ 72 ಸಾವಿರ ಹಣ ವಶಕ್ಕೆ ಪಡೆದಿದ್ದಾರೆ.

Join Whatsapp
Exit mobile version