Home ಟಾಪ್ ಸುದ್ದಿಗಳು ಮೋದಿ ಅಪ್ಪನ ಮನೆಯಿಂದ ಹಣ ತಂದು ಬೆಂಗಳೂರು- ಮೈಸೂರು ಹೈವೇಯನ್ನು ನಿರ್ಮಾಣ ಮಾಡಿಲ್ಲ: ಎಚ್.ವಿಶ್ವನಾಥ್ ಕಿಡಿ

ಮೋದಿ ಅಪ್ಪನ ಮನೆಯಿಂದ ಹಣ ತಂದು ಬೆಂಗಳೂರು- ಮೈಸೂರು ಹೈವೇಯನ್ನು ನಿರ್ಮಾಣ ಮಾಡಿಲ್ಲ: ಎಚ್.ವಿಶ್ವನಾಥ್ ಕಿಡಿ

ಮೈಸೂರು: ಮೋದಿ ಅಪ್ಪನ ಮನೆಯಿಂದ ಹಣ ತಂದು ಬೆಂಗಳೂರು- ಮೈಸೂರು ಹೈವೇಯನ್ನು ನಿರ್ಮಾಣ ಮಾಡಿಲ್ಲ. ಜನರ ತೆರಿಗೆ ಹಣದಿಂದ ನಿರ್ಮಾಣ ಮಾಡಲಾಗಿದೆ. ಆದರೂ ಹೈವೇಗೆ ದುಬಾರಿ ಟೋಲ್ ನಿಗದಿ ಮಾಡಿರೋದು ಸರಿಯಲ್ಲ ಎಂದು ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅಪ್ಪನ ಮನೆಯಿಂದ ಹಣ ತಂದು ಬೆಂಗಳೂರು- ಮೈಸೂರು ಹೈವೇಯನ್ನು ನಿರ್ಮಾಣ ಮಾಡಿಲ್ಲ. ಪ್ರತಾಪ್ ಸಿಂಹ ಅಪ್ಪನ ಮನೆಯಿಂದ ಹಣ ತಂದು ಮಾಡಿಲ್ಲ. ಬೆಂಗಳೂರು ಮೈಸೂರು ಹೈವೇ ಕಾಮಗಾರಿ ಅವೈಜ್ಞಾನಿಕವಾಗಿದೆ. ಹೈವೇ ನಿರ್ಮಾಣದಿಂದ ಮಂಡ್ಯ ಜಿಲ್ಲೆಯ ಜನರಿಗೆ ತೀವ್ರ ತೊಂದರೆಯಾಗಿದೆ ಎಂದರು.

ಹೈವೇ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಪ್ರಧಾನಿ ನರೇಂದ್ರ ಮೋದಿ ಬಂದು ಉದ್ಘಾಟನೆ ಮಾಡಿದ್ದಾರೆ. ಈ ಮೂಲಕ ತಾವು ಹೇಳಿದ್ದೇ ಸರಿ, ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಿದ್ದಾರೆ. ಹೈವೇ ಕಾಮಗಾರಿ ನೆಪದಲ್ಲಿ ಲೂಟಿ ಮಾಡಿದ್ದಾರೆ. 200 ಹೋಟೆಲ್, 90 ಪೆಟ್ರೋಲ್ ಬಂಕ್ ಗಳು ಬಂದ್ ಆಗಿವೆ. ಬಿಜೆಪಿಯವರು ಬಡ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Join Whatsapp
Exit mobile version