ನವದೆಹಲಿ : ಸ್ವತಃ ಕೇಂದ್ರ ಸರಕಾರವೇ ಬಿಡುಗಡೆಗೊಳಿಸಿರುವ ಸಾಲದ ಅಧಿಕೃತ ಅಂಕಿಅಂಶಗಳ ಪ್ರಕಾರ, 2020-21ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಒಟ್ಟು ಸಾಲ ಶೇ.5.6ರಷ್ಟು ಹೆಚ್ಚಳವಾಗಿದ್ದು, ಅದು 107.04 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ಕೊರೊನ ಸಾಂಕ್ರಾಮಿಕತೆ ಭಾರತದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಸರ್ಕಾರ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿ (ಏಪ್ರಿಲ್-ಜೂನ್)ಯಲ್ಲಿ ಆರ್ಥಿಕತೆಯಲ್ಲಿ ತೀವ್ರ ಕುಸಿತ ಕಂಡು, ಜಿಡಿಪಿ ಶೇ.-23.9ರಷ್ಟು ದಾಖಲಾಗಿತ್ತು.
ಈ ಐತಿಹಾಸಿಕ ಕುಸಿತಕ್ಕೆ ಕೊರೊನ ಕಾರಣ ಎಂದು ಸರಕಾರ ಮತ್ತು ಬಿಜೆಪಿಗರು ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರಕಾರದ ತಪ್ಪಾದ ಆರ್ಥಿಕ ನೀತಿಗಳೂ ಇದಕ್ಕೆ ಕಾರಣ ಎಂದು ಅನೇಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.