ಹೊಸದಿಲ್ಲಿ: ಹಿಂದುತ್ವವಾದಿಯಾಗಿದ್ದ ಸಾವರ್ಕರ್ ಕನಸನ್ನು ಮೋದಿ ಸಾಕಾರಗೊಳಿಸಿದ್ದಾರೆ ಎಂದು ಆರೆಸ್ಸೆಸ್ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ.
ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಸಾವರ್ಕರ್ ಅವರ ಕನಸು ನನಸಾಗಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಅವಹೇಳನ ಮಾಡುವವರು ಭಾರತೀಯ ರಾಷ್ಟ್ರೀಯತೆಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ನಿನ್ನೆ ಹೇಳಿದ್ದರು. ಸಾವರ್ಕರ್ ಅವರನ್ನು ನಿಂದಿಸುವವರು ಮುಂದೆ ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಸರಸ್ವತಿ ಮತ್ತು ಯೋಗಿ ಅರವಿಂದ್ ಅವರನ್ನು ಅವಮಾನ ಮಾಡಲಿದ್ದಾರೆ. ಅಂತಹ ಪ್ರಯತ್ನಗಳ ನಿಜವಾದ ಗುರಿ ವ್ಯಕ್ತಿಯಲ್ಲ, ಭಾರತೀಯ ರಾಷ್ಟ್ರೀಯತೆ ಎಂದು ಅವರು ಹೇಳಿದರು.