ಹಳಸಿದ ದಾಲ್, ಶಾಸಕ ಸಂಜಯ್ ದೂರು: ಎಂಎಲ್​ಎ ಗೆಸ್ಟ್​ಹೌಸ್ ಕ್ಯಾಂಟೀನ್ ಪರವಾನಗಿ ರದ್ದು

- Advertisement -

ಮುಂಬೈ: ಮುಂಬೈನ ಶಾಸಕರ ವಸತಿಗೃಹದಲ್ಲಿರುವ ಕ್ಯಾಂಟೀನ್​​ನಲ್ಲಿ ಹಳಸಿದ ದಾಲ್ ನೀಡಿರುವ ಆರೋಪದ ಮೇಲೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಕ್ಯಾಂಟೀನ್ ಪರವಾನಗಿ ರದ್ದುಗೊಳಿಸಿದೆ.

- Advertisement -

ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದ ನಿಮಿತ್ತ ಶಾಸಕರೆಲ್ಲರೂ ಮುಂಬೈಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಕೂಡ ಎಂಎಲ್ಎ ಗೆಸ್ಟ್​ಹೌಸ್​​ನಲ್ಲಿ ತಂಗಿದ್ದರು.

ಆ ಸಮಯದಲ್ಲಿ ಊಟಕ್ಕೆಂದು ಕ್ಯಾಂಟೀನ್​​ಗೆ ಹೋಗಿದ್ದರು. ಅಲ್ಲಿ ಹಳಸಿದ್ದ ದಾಲ್ ನೀಡಿದ್ದರು. ಅದಕ್ಕೆ ಆಕ್ರೋಶಗೊಂಡ ಶಾಸಕರು ಕ್ಯಾಂಟೀನ್ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದರು. ಹಾಗೆಯೇ ಕ್ಯಾಂಟೀನ್ ಆಹಾರದ ಬಗ್ಗೆ ಕಳವಳ ವ್ಯಕ್ತಪಡಿಸಿ ದೂರು ನೀಡಿದ್ದರು.

- Advertisement -

ಎಫ್​ಡಿಎ ತುರ್ತು ಕ್ರಮ ಕೈಗೊಂಡಿದೆ. ಅಜಂತಾ ಕ್ಯಾಟರರ್ಸ್​​ ಅನ್ನು ಅಮಾನತು ಮಾಡಲಾಗಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ರ ಪ್ರಮುಖ ನಿಬಂಧನೆಗಳನ್ನು ಮತ್ತು ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಆಹಾರ ವ್ಯವಹಾರಗಳ ಪರವಾನಗಿ ಮತ್ತು ನೋಂದಣಿ) ನಿಯಮಗಳು, 2011 ಅನ್ನು ಉಲ್ಲಂಘಿಸಿದೆ ಎಂದು ಹೇಳಿದೆ.

Must Read

Related Articles