Home ಟಾಪ್ ಸುದ್ದಿಗಳು ರಾಷ್ಟೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ರಸ್ತೆಯ ಹೊಂಡದ ನೀರಿನಲ್ಲೇ ಸ್ನಾನ‌ ಮಾಡಿದ ಶಾಸಕಿ

ರಾಷ್ಟೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ರಸ್ತೆಯ ಹೊಂಡದ ನೀರಿನಲ್ಲೇ ಸ್ನಾನ‌ ಮಾಡಿದ ಶಾಸಕಿ

ಜಾರ್ಖಂಡ್: ರಾಷ್ಟ್ರೀಯ ಹೆದ್ದಾರಿ 133ರ ದುರಸ್ತಿಗೆ ಆಗ್ರಹಿಸಿ ಜಾರ್ಖಂಡ್‌ನ ಶಾಸಕಿಯೋರ್ವಳು ರಸ್ತೆಯ ಕೆಸರಿನ ನೀರಿನಲ್ಲಿ ಸ್ನಾನ ಮಾಡಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಜಾರ್ಖಂಡ್‌‌ನ ಗೋಡಾ ಕ್ಷೇತ್ರದ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಈ ವಿಭಿನ್ನ ಪ್ರತಿಭಟನೆ ನಡೆಸಿದ್ದು,‌ ರಸ್ತೆ ದುರಸ್ತಿ ಕಾರ್ಯ ಆರಂಭವಾಗುವವರೆಗೂ ಇಲ್ಲಿಂದ ಕದಲುದಿಲ್ಲವೆಂದು ಶಾಸಕಿ ಹೇಳಿದ್ದಾರೆ.


ಈ ರಸ್ತೆ ಬಹಳ ದಿನಗಳಿಂದ ಹದಗೆಟ್ಟಿದ್ದು, ರಸ್ತೆಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿಯ ದುರಸ್ಥಿಯ ಹೊಣೆ ರಾಜ್ಯ ಸರಕಾರದ್ದಲ್ಲ. ಅದನ್ನು ಸರಿಪಡಿಸಬೇಕಿರುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. ಇಲ್ಲಿಗೆ ಹಲವು ಬಾರಿ ದೂರು ನೀಡಿದ್ದರೂ ರಸ್ತೆ ದುರಸ್ತಿಯಾಗಿಲ್ಲ ಎಂದು ಶಾಸಕಿ ಆರೋಪಿಸಿದ್ದಾರೆ. ಆದರೆ, ಹಲವು ಬಾರಿ ಸರಕಾರ ರಸ್ತೆ ದುರಸ್ತಿಗೆ ಮುಂದಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿಲ್ಲ ಎಂದು ಶಾಸಕರು ಆರೋಪಿಸಿದರು.


ಈ ನಡುವೆ ಶಾಸಕಿಯ ಪ್ರತಿಭಟನೆಯ ವಿರುದ್ಧ ಗೋಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರತಿಕ್ರಯಿಸಿದ್ದು, ರಸ್ತೆಯ ಈ ಸ್ಥಿತಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಟ್ವೀಟ್ ಮಾಡಿದ್ದಾರೆ. ರಸ್ತೆ ದುರಸ್ತಿಗೆ ಕೇಂದ್ರ ಸರಕಾರ 6 ತಿಂಗಳ ಹಿಂದೆಯೇ ರಾಜ್ಯ ಸರಕಾರಕ್ಕೆ 75 ಕೋಟಿ ನೀಡಿದ್ದು, ಕಾಮಗಾರಿ ಏಕೆ ಆರಂಭಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version