Home ಟಾಪ್ ಸುದ್ದಿಗಳು ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕ ಶವವಾಗಿ ಪತ್ತೆ

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕ ಶವವಾಗಿ ಪತ್ತೆ

0

ಕಾಸರಗೋಡು: ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮತ್ತು ಆಟೋ ಚಾಲಕ ಶವವಾಗಿ ಪತ್ತೆ ಆಗಿರುವಂತಹ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಮಂಡೆಕಾಪು ಗ್ರಾಮದ ಬಳಿ ನಡೆದಿದೆ.

ಆಟೋ ಚಾಲಕ ಪ್ರದೀಪ್(42), 15 ವರ್ಷದ ವಿದ್ಯಾರ್ಥಿನಿ (ಗುರುತು ಪತ್ತೆಯಾಗಿಲ್ಲ) ಮೃತರು. ಪ್ರದೀಪ್ ಅಪ್ರಾಪ್ತೆಯ ಮನೆಗೆ ನಿತ್ಯ ಭೇಟಿ ನೀಡುತ್ತಿದ್ದು, ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಫೆ.11ರಂದು ರಾತ್ರಿ ಕಾಸರಗೋಡು ಜಿಲ್ಲೆಯ ಮಂಡೆಕಾಪು ಗ್ರಾಮದ ನಿವಾಸಿಗಳಾದ ಪ್ರದೀಪ್ ಮತ್ತು ಅಪ್ರಾಪ್ತ ವಿದ್ಯಾರ್ಥಿನಿ ನಾಪತ್ತೆಯಾಗಿದ್ದರು. ಅದೇ ದಿನ ನಾಪತ್ತೆ ಬಗ್ಗೆ ಕುಂಬಳೆ ಪೊಲೀಸರಿಗೆ ಅಪ್ರಾಪ್ತೆಯ ತಾಯಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸಿದರೂ ಇಬ್ಬರೂ ಪತ್ತೆಯಾಗಿರಲಿಲ್ಲ. ಇಬ್ಬರ ಮೊಬೈಲ್ ಫೋನ್‌ಗಳು ಮಂಡೆಕಾಪು ಬಳಿ ಸ್ವಿಚ್ ಆಫ್ ಆಗಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಇದರ ಆಧಾರದ ಮೇಲೆ ಡ್ರೋನ್ ಹಾಗೂ ಪೊಲೀಸ್ ಶ್ವಾನ ಬಳಸಿ ಶೋಧ ನಡೆಸಲಾಗಿತ್ತು. ಆದರೂ ಇಬ್ಬರ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಅಪ್ರಾಪ್ತೆ ಪತ್ತೆಯಾಗದ ಹಿನ್ನೆಲೆಯಲ್ಲಿ ಪೋಷಕರು ಹೈಕೋರ್ಟ್ ಮೊರೆ ಹೋಗಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಇಂದು ಸ್ಥಳೀಯರ ನೆರವಿನೊಂದಿಗೆ ಇಬ್ಬರ ಮನೆಯ ಸಮೀಪ ಹುಡುಕಾಟ ಮಾಡಲಾಗಿದೆ.

ಎಕರೆಗಟ್ಟಲೆ ಹರಡಿರುವ ಅಕೇಶಿಯಾ ಅರಣ್ಯದಲ್ಲಿ ಶೋಧ ನಡೆಸಿದ ವೇಳೆ ಒಂದೇ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿ ಒಂದು ಚಾಕು ಮತ್ತು ಎರಡು ಮೊಬೈಲ್ ಫೋನ್‌ಗಳು ಪತ್ತೆ‌ಯಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version