Home ಟಾಪ್ ಸುದ್ದಿಗಳು ಜಮ್ಮು-ಕಾಶ್ಮೀರದಲ್ಲಿ ಪರಿಚ್ಛೇದ 370 ಮರುಸ್ಥಾಪಿಸುವವರೆಗೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ : ಮೆಹಬೂಬಾ ಮುಫ್ತಿ

ಜಮ್ಮು-ಕಾಶ್ಮೀರದಲ್ಲಿ ಪರಿಚ್ಛೇದ 370 ಮರುಸ್ಥಾಪಿಸುವವರೆಗೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ : ಮೆಹಬೂಬಾ ಮುಫ್ತಿ

ನವದೆಹಲಿ : ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಪರಿಚ್ಛೇದ 370 ಅನ್ನು ಮರು ಜಾರಿಗೊಳಿಸುವ ವರೆಗೂ ತಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪಿಡಿಪಿ ನಾಯಕಿ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಘೋಷಿಸಿದ್ದಾರೆ.

ವಿಧಾನಸಭಾ ಚುನಾವಣೆಯ ವಿಷಯ ಬಂದಾಗ, ಜಮ್ಮು-ಕಾಶ್ಮಿರದಲ್ಲಿ ಪರಿಚ್ಛೇದ 370 ಜಾರಿಯಾಗುವ ವರೆಗೂ ನಾನು ಯಾವುದೇ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಮೆಹಬೂಬಾ ಹೇಳಿದ್ದಾರೆ.

ಡಿಡಿಸಿ ಚುನಾವಣೆಯಲ್ಲಿ ಮೈತ್ರಿಕೂಟದ ಮೂಲಕ ಚುನಾವಣೆಗೆ ಸ್ಪರ್ಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾವು ಪ್ರತಿರೋಧಿಗಳು ಹೌದು, ಆದರೆ ಜಮ್ಮು-ಕಾಶ್ಮಿರದ ಹಿತ ಕಾಯುವ ವಿಷಯದಲ್ಲಿ ನಾವು ಎಲ್ಲರೂ ಒಂದಾಗಬಹುದು. ಚುನಾವಣೆ ಬಗ್ಗೆ ಮಾತ್ರ ನಾವು ಮಾತನಾಡುತ್ತಿಲ್ಲ, ನಾವು ಕಳೆದುಕೊಂಡಿರುವುದನ್ನು ಮರಳಿ ಸ್ಥಾಪಿಸುವುದಕ್ಕೂ ನಾವು ಒಂದಾಗಬಲ್ಲೆವು ಎಂದು ಅವರು ಹೇಳಿದ್ದಾರೆ.

ವಿಧಾನಸಭಾ ಚುನಾವಣೆ ಹತ್ತಿರ ಬಂದಾಗ ನಾವು ಕುಳಿತು ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚಿಸುತ್ತೇವೆ. ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಅಲ್ಲ ಎಂದು ಮೆಹಬೂಬಾ ಸ್ಪಷ್ಟಪಡಿಸಿದ್ದಾರೆ.

Join Whatsapp
Exit mobile version