Home ಟಾಪ್ ಸುದ್ದಿಗಳು ಮೇಘಾಲಯ-ನಾಗಾಲ್ಯಾಂಡ್‌ ಚುನಾವಣೆ| ಮತದಾನ ಆರಂಭ

ಮೇಘಾಲಯ-ನಾಗಾಲ್ಯಾಂಡ್‌ ಚುನಾವಣೆ| ಮತದಾನ ಆರಂಭ

ಹೊಸದಿಲ್ಲಿ: ಈಶಾನ್ಯ ಭಾರತದ ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ.

ಇದಕ್ಕಾಗಿ ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದರು. ಈ ಎರಡು ರಾಜ್ಯಗಳು ತಲಾ 60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿವೆ.


ನಾಗಾಲ್ಯಾಂಡ್‌ನ‌ಲ್ಲಿ ಒಂದು ಕ್ಷೇತ್ರದ ಅಭ್ಯರ್ಥಿಗೆ ಅವಿರೋಧ(ಅಕುಲುಟೊ) ಹಾಗೂ ಮೇಘಾಲಯದಲ್ಲಿ ಯುಡಿಪಿ ಅಭ್ಯರ್ಥಿ ನಿಧನದ ಹಿನ್ನೆಲೆ ಒಂದು ಕ್ಷೇತ್ರಕ್ಕೆ (ಸೋಹಿಯಾಂಗ್‌) ಚುನಾವಣೆ ನಡೆಯುತ್ತಿಲ್ಲ.
ಇಂದು ಎರಡೂ ರಾಜ್ಯಗಳ 59 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

Join Whatsapp
Exit mobile version