ರೋಮ್: ಆಫ್ರಿಕಾದ ವಲಸೆಗಾರರನ್ನು ಹೊತ್ತ ದೋಣಿಯು ಇಟೆಲಿಯ ಕ್ರೋಟೋನ್ ಕರಾವಳಿಯಾಚೆ ಮೆಡಿಟರೇನಿಯನ್ ಸಮುದ್ರದ ನಡುವೆ ತುಂಡಾಗಿ ಮುಳುಗಿ ಕನಿಷ್ಠ 40ರಷ್ಟು ಜನರು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಹೆಚ್ಚಿನ ಸಂಖ್ಯೆಯ ವಲಸಿಗರನ್ನು ಹೊತ್ತ ದೋಣಿಯು ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿತ್ತು. ಪರಿಣಾಮ ದೋಣಿಯ ಮಧ್ಯಭಾಗ ತುಂಡಾಗಿ, ದೋಣಿ ಎರಡು ಭಾಗವಾಯಿತು. ಈ ಅವಘಡದಲ್ಲಿ ಮೃತಪಟ್ಟ 40 ಜನರಲ್ಲಿ ಕೆಲವೇ ತಿಂಗಳ ಮಗು ಕೂಡ ಸೇರಿದೆ. ಇನ್ನೂ ಹೆಚ್ಚಿನ ಸಾವು ಸಂಭವಿಸಿರುವ ಸಾಧ್ಯತೆಯನ್ನು ಅಲ್ಲಿನ ಮಾಧ್ಯಮಗಳು ತಿಳಿಸಿವೆ.
‘ಅಪಾಯಕಾರಿ ಮೆಡಿಟರೇನಿಯನ್ ಕಡಲನ್ನು ಮತ್ತೆ ಮತ್ತೆ ವಲಸಿಗರು ದಾಟುವ ಸಾಹಸಕ್ಕೆ ಇಳಿಯುವುದಾದರೆ ಅವರ ಸಂರಕ್ಷಿತತೆಯ ಜವಾಬ್ದಾರಿ ಹೊರಲಾಗದು’ ಎಂದು ಇಟೆಲಿ ಸಂಸತ್ತು ಶನಿವಾರವಷ್ಟೆ ಕಾಯ್ದೆ ಪಾಸು ಮಾಡಿತ್ತು.