Home ಟಾಪ್ ಸುದ್ದಿಗಳು ಪ್ರಮುಖ ಭಾಗಗಳಿಲ್ಲದ ‘ಅಖಂಡ ಭಾರತ’ ನಕ್ಷೆ| ವಿವಾದದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ

ಪ್ರಮುಖ ಭಾಗಗಳಿಲ್ಲದ ‘ಅಖಂಡ ಭಾರತ’ ನಕ್ಷೆ| ವಿವಾದದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ

ಉತ್ತರಾಖಂಡದ ಹೊಸ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧೋಮಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ವಿವಾದಕ್ಕೆ ಸಿಲುಕಿದ್ದಾರೆ. ಆರು ವರ್ಷಗಳ ಹಿಂದೆ ಪುಷ್ಕರ್ ಅವರು ಭಾರತದ ಪ್ರಮುಖ ಭಾಗಗಳನ್ನು ಕೈ ಬಿಟ್ಟು ‘ಅಖಂಡ ಭಾರತ’ದ ಭೂಪಟವನ್ನು ಟ್ವೀಟ್ ಮಾಡಿದ್ದರು.

ಬಿಳಿ ರೇಖೆಯಿಂದ ಗುರುತಿಸಿರುವ ಭಾರತೀಯ ನಕ್ಷೆಯಿಂದ ಲಡಾಖ್ ಸೇರಿದಂತೆ ಕೆಲವು ಪ್ರದೇಶಗಳನ್ನು ಕೈಬಿಟ್ಟಿರುವುದರ ವಿರುದ್ಧ ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಭಾರತದ ವಿವಾದಾತ್ಮಕ ನಕ್ಷೆಯನ್ನು ಪ್ರಕಟಿಸಿದ್ದಕ್ಕಾಗಿ ಟ್ವಿಟರ್ ವಿರುದ್ಧ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದರು. ನಾಲ್ಕು ತಿಂಗಳೊಳಗೆ ಉತ್ತರಾಖಂಡದ ಮೂರನೇ ಮುಖ್ಯಮಂತ್ರಿಯಾದ ಪುಷ್ಕರ್ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ವಿವಾದಕ್ಕೆ ಸಿಲುಕಿದ್ದಾರೆ.

ಉತ್ತರಾಖಂಡ ಬಿಜೆಪಿಯಲ್ಲಿನ ಆಂತರಿಕ ಕಲಹದ ಹಿನ್ನೆಲೆಯಲ್ಲಿ ತೀರಥ್ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 45 ವರ್ಷದ ಪುಷ್ಕರ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

Join Whatsapp
Exit mobile version