Home ಕರಾವಳಿ ಕಿಂಡಿ ಅಣೆಕಟ್ಟು ಯೋಜನೆಗೆ 500ಕೋಟಿ: ಮಾಧು ಸ್ವಾಮಿ

ಕಿಂಡಿ ಅಣೆಕಟ್ಟು ಯೋಜನೆಗೆ 500ಕೋಟಿ: ಮಾಧು ಸ್ವಾಮಿ

ಮಂಗಳೂರು: ರಾಜ್ಯದಲ್ಲಿ ಪಶ್ಚಿಮ ವಾಹಿನಿ ಯೋಜನೆಯ ಪ್ರಕಾರ ಹರಿಯುವ ನದಿಗಳಿಗೆ ಸುಮಾರು 3-4. ಕಿ.ಮೀ. ಅಂತರ ದಲ್ಲಿ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲು ರಾಜ್ಯ ಬಜೆಟ್ ನಲ್ಲಿ 500 ಕೋಟಿ ರೂ. ನಿಗದಿ ಪಡಿಸಲಾಗಿದೆ ಎಂದು ಸಣ್ಣ ನೀರಾವರಿ ಖಾತೆ ಯ ಸಚಿವ ಜೆ.ಸಿ. ಮಾಧು ಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.


ಅವರು ಇಂದು ದ.ಕ. ಜಿಲ್ಲೆಯ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಜಿಲ್ಲೆಯ ವಿವಿಧ ವಿಧಾನ ಸಭಾ ಕ್ಷೇತ್ರದ ಶಾಸಕರ ಜೊತೆ ಪಶ್ಚಿಮ ವಾಹಿನಿ ಯೋಜನೆಯ ಅನುಷ್ಠಾನ ದ ಬಗ್ಗೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸಮಾಲೋಚನಾ ಸಭೆ ನಡೆಸಿದರು.
ಈ ಯೋಜನೆಯ ಮುಖ್ಯ ಉದ್ದೇಶ ಕ್ರಷಿ ಜಮೀನುಗಳಿಗೆ ನೀರು ಒದಗಿಸುವುದು ಮತ್ತು ಕುಡಿಯುವ ನೀರು ಪೂರೈಕೆ ಮಾಡುವುದಾಗಿದೆ.ಅಂತರ್ಜಲದ ಅಭಿವೃದ್ಧಿ ಗೂ ಇದರಿಂದ ಸಹಾಯಕವಾಗ ಲಿದೆ.ಪಶ್ಚಿಮಾಮುಖವಾಗಿ ಹರಿದು ಸಮುದ್ರ ಸೇರುವ ನದಿಗಳಿಗೆ ಕಿಂಡಿ ಅಣೆಕಟ್ಟು ನಿರ್ಮಿ ಸುವ ಈ ಯೋಜನೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೀರಿನ ಅಭಾವದ ಸಮಸ್ಯೆ ನಿವಾರಿಸಲು ಮತ್ತು ಅಂತರ್ಜಲದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.


*ಮಂಗಳೂರು ತಾಲೂಕಿನ ಅಡ್ಯಾರ್ ಪ್ರದೇಶದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ 170 ಕೋಟಿ ರೂಪಾಯಿ ಗಳ ಕಿಂಡಿ ಅಣೆಕಟ್ಟು ನಿರ್ಮಾಣ ವಾಗಲಿದೆ ಎಂದು ಸವಿವ ಮಾಧು ಸ್ವಾಮಿ ತಿಳಿಸಿದ್ದಾರೆ.
*15ನೆ ಹಣಕಾಸು ಯೋಜನೆಯ ಅನುದಾ ನವನ್ನು ಈ ಬಾರಿ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು.ಈ ಹಿಂದೆ ಒಂದೇ ಬಾರಿಗೆ ಬಿಡುಗಡೆ ಮಾಡಲಾಗು ತ್ತಿತ್ತು.ಈ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು ಎನ್ನುವ ದ್ರಷ್ಟಿಯಿಂದ ರಾಜ್ಯ,ಜಿಲ್ಲೆ,ಪಂಚಾಯತ್ ಹಂತಗಳಿಗೆ ವಿಂಗಡಿಸಿ ನೀಡಲಾಗುತ್ತಿದೆ ಈ ಬಗ್ಗೆ ಗೊಂದಲ ಇಲ್ಲ ಎಂದು ಸಚಿವ ಮಾಧು ಸ್ವಾಮಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಉಮನಾಥ್ ಕೋಟ್ಯಾನ್, ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್, ಯು.ಟಿ. ಖಾದರ್, ಸಂಜೀವ ಮಠಂದೂರು, ಭರತ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.

Join Whatsapp
Exit mobile version