ಕೈಗೆಟುಕುವ ದರದಲ್ಲಿ ದೊರೆಯಲಿದೆ ಹಲವು ಕ್ಯಾನ್ಸರ್ ಸಂಬಂಧ ಔಷಧಗಳು: ಕಾರಣವೇನು ಗೊತ್ತಾ?!

Prasthutha|

ನವದೆಹಲಿ: ರಾಷ್ಟ್ರೀಯ “ಅಗತ್ಯ ಔಷಧಿಗಳ” ಪಟ್ಟಿಗೆ 34 ಹೊಸ ಔಷಧಗಳು ಸೇರ್ಪಡೆಯಾಗಿದ್ದು, ಇದರಲ್ಲಿ ಹಲವು ಕ್ಯಾನ್ಸರ್‌ಗೆ ಸಂಬಂಧಪಟ್ಟ ಔಷಧಗಳು ಒಳಗೊಂಡಿದೆ. ಸರಕಾರ ಈ ಪಟ್ಟಿಗೆ ಸೇರಿಸಿದ ಔಷಧಗಳ ಬೆಲೆಯಲ್ಲಿ ಸಹಜವಾಗಿಯೇ ಇಳಿಕೆ ಕಾಣಲಿದೆ. ಇದು ರೋಗಿಗಳಿಗೆ ಸಹಕಾರಿಯಾಗಲಿದೆ ಎಂದು ಸರಕಾರ ಹೇಳಿದೆ.

- Advertisement -

ನಾಲ್ಕು ಪ್ರಮುಖ ಕ್ಯಾನ್ಸರ್‌ಗೆ ಸಂಬಂಧಿಸಿದ ಔಷಧಿಗಳಾದ Bendamustine Hydrochloride, Irinotecan HCI Trihydrate, Lenalidomide and Leuprolide acetateನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೇ ಮಾನಸಿಕ ರೋಗ ಚಿಕಿತ್ಸಕ ಔಷಧಗಳಾದ Nicotine Replacement Therapy and Buprenorphine ನ್ನೂ ಈ ಪಟ್ಟಿಗೆ ಸೇರಿಸಲಾಗಿದೆ. Ivermectin, Mupirocin ಮತ್ತು Meropenem ನಂತಹ ಸೋಂಕು ನಿವಾರಕಗಳು ಸಹ ಈ ಪಟ್ಟಿಗೆ ಸೇರಿಸಲಾದ ಇತರ ಔಷಧಗಳು.

ಈ ನೂತನ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಟ್ವೀಟ್ ಮಾಡಿದ್ದು, “ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ 2022 ಅನ್ನು ಬಿಡುಗಡೆ ಮಾಡಿದೆ. ಇದು 27 ವಿಭಾಗಗಳಲ್ಲಿ 384 ಔಷಧಗಳನ್ನು ಒಳಗೊಂಡಿದೆ. ಹಲವಾರು ಪ್ರತಿಜೀವಕಗಳು (ಆಂಟಿಬಯೋಟಿಕ್), ಲಸಿಕೆಗಳು, ಕ್ಯಾನ್ಸರ್ ವಿರೋಧಿ ಔಷಧಿಗಳು ಮತ್ತು ಇತರ ಹಲವು ಪ್ರಮುಖ ಔಷಧಿಗಳು ಇನ್ನು ಹೆಚ್ಚು ಕೈಗೆಟುಕುವ ದರದಲ್ಲಿ ದೊರೆಯಲಿದೆ. ಮತ್ತು ಇದು ರೋಗಿಗಳ ಹೆಚ್ಚುವರಿ ವೆಚ್ಚದ ಹೊರೆಯನ್ನು ಕಡಿಮೆ ಮಾಡಲಿದೆ” ಎಂದರು.

- Advertisement -

ಅಲ್ಲದೇ ಕ್ಯಾನ್ಸರ್ ಅನ್ನು ಅಧಿಸೂಚಿತ ಕಾಯಿಲೆ ಎಂದು ವರ್ಗೀಕರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಂಸದೀಯ ಸ್ಥಾಯಿ ಸಮಿತಿಯು ಸರಕಾರಕ್ಕೆ ಶಿಫಾರಸು ಮಾಡಿದೆ.

Join Whatsapp
Exit mobile version