Home ಕರಾವಳಿ ಮಂಜೇಶ್ವರ: ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ಕಟ್ಟಡ

ಮಂಜೇಶ್ವರ: ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ಕಟ್ಟಡ

ಮಂಜೇಶ್ವರ: ತೀವ್ರ ಮಳೆಗೆ ಕಟ್ಟಡವೊಂದು ಕುಸಿದುಬಿದ್ದ ಘಟನೆ ವರ್ಕಾಡಿಯಲ್ಲಿ ಸಂಭವಿಸಿದೆ. ಈ ಕಟ್ಟಡ ತೀವ್ರ ಮಳೆಯ ಹಿನ್ನೆಲೆಯಲ್ಲಿ ವಾರದ ಹಿಂದೆಯೇ ಬಿರುಕು ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಅದರಲ್ಲಿದ್ದವರನ್ನು ಸ್ಥಳಾಂತರಿಸಲಾಗಿತ್ತು. ಹಾಗಾಗಿ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.

ಕಟ್ಟಡದಲ್ಲಿ ಕೆಲ ವಸತಿ ಕೊಠಡಿಗಳ ಸಹಿತ ವಾಣಿಜ್ಯ ಕೊಠಡಿಗಳು ಇದ್ದವು. ಕಟ್ಟಡದ ಹಿಂಭಾಗದಲ್ಲಿ ಭಾರೀ ಇಳಿಜಾರು ಪ್ರದೇಶವಿದ್ದುದರಿಂದ ತೀವ್ರ ಮಳೆಗೆ ಕಟ್ಟಡ ಕುಸಿದು ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Join Whatsapp
Exit mobile version