Home ಟಾಪ್ ಸುದ್ದಿಗಳು ಕೊಡಗು: ತುರ್ತು ಅಗತ್ಯಕ್ಕೆ ಸಾಕಷ್ಟು ಹಣ ಇದೆ; ಸರಕಾರದ ಮೇಲೆ ಗೂಬೆ ಕೂರಿಸದಿರಿ: ಶಾಸಕ ಕೆ.ಜಿ...

ಕೊಡಗು: ತುರ್ತು ಅಗತ್ಯಕ್ಕೆ ಸಾಕಷ್ಟು ಹಣ ಇದೆ; ಸರಕಾರದ ಮೇಲೆ ಗೂಬೆ ಕೂರಿಸದಿರಿ: ಶಾಸಕ ಕೆ.ಜಿ ಬೋಪಯ್ಯ

ಮಡಿಕೇರಿ: ಮುಖ್ಯಮಂತ್ರಿ ಮಳೆ ಪರಿಹಾರ ಘೋಷಣೆ ವಿಚಾರದಲ್ಲಿ ಕೊಡಗಿಗೆ ಅನ್ಯಾಯವಾಗಿಲ್ಲ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿಡುಗಡೆ ಮಾಡಿರುವುದು ಬೆಳೆ ಅಥವಾ ರಸ್ತೆ ದುರಸ್ತಿಯಂತಹ ಪರಿಹಾರದ ಹಣವಲ್ಲ. ಇದು ತುರ್ತು ಪರಿಹಾರ ಕಾಮಗಾರಿಗಳಿಗಾಗಿ ಇತರೆ ಮಳೆ ಪೀಡಿತ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಕೊಡಗು ಜಿಲ್ಲಾಧಿಕಾರಿ ಬಳಿ ಒಟ್ಟು 71 ಕೋಟಿ.ರೂ ತುರ್ತು ಪರಿಹಾರದ ಹಣವಿದ್ದು, ಅದರಲ್ಲಿ ಈಗಾಗಲೇ ಆಗಬೇಕಿರುವ ತುರ್ತು ಪರಿಹಾರಕ್ಕಾಗಿ ಮೀಸಲಿಟ್ಟ ಹಣ ಹೊರತುಪಡಿಸಿ ಇನ್ನೂ 35 ಕೋಟಿ ಬಾಕಿ ಇದೆ. ಹಾಗಾಗಿ ನಮ್ಮಲ್ಲಿ ತುರ್ತಾಗಿ ಬಳಸಲು ಸಾಕಷ್ಟು ಹಣ ಇದೆ ಎಂದು ಬೋಪಯ್ಯ ತಿಳಿಸಿದ್ದಾರೆ.

ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕೊಡಗನ್ನು ಸೇರಿಸಲಾಗಿಲ್ಲ, ಅನುದಾನ ಬಿಡುಗಡೆಯಾಗಿಲ್ಲವೆಂದು ಜಿಲ್ಲೆಯ ಜನ ನಿರಾಶರಾಗುವ ಅಗತ್ಯವಿಲ್ಲ ಎಂದಿರುವ ಅವರು ಸುಮ್ಮನೆ ಸರಕಾರದ ಮೇಲೆ ಗೂಬೆ ಕೂರಿಸುವುದು ಬೇಡ ಎಂದಿದ್ದಾರೆ.

Join Whatsapp
Exit mobile version