ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದನ್ನು ಸ್ವಾಗತಿಸಿರುವ ಆಮ್ ಆದ್ಮಿ ಪಕ್ಷವು, ಇದು ಸತ್ಯಕ್ಕೆ ಸಂದ ಜಯ ಎಂದು ಹೇಳಿದೆ.
ಅಲ್ಲದೆ ಜೈಲಿನಲ್ಲಿರುವ ಇತರ ನಾಯಕರಿಗೂ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಎಎಪಿ ಸಂಸದ ರಾಘವ ಛಡ್ಡಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ‘ದೆಹಲಿ ಶಿಕ್ಷಣ ಕ್ರಾಂತಿ ಹೀರೋ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ಲಭಿಸಿದ್ದರಿಂದ ಇಡೀ ದೇಶವೇ ಸಂತೋಷದಲ್ಲಿದೆ. ಗೌರವಾನ್ವಿತ ಸುಪ್ರೀಂ ಕೋರ್ಟ್ ಗೆ ನಾನು ನನ್ನ ಹೃದಯದ ಅಂತರಾಳದಿಂದ ಧನ್ಯವಾದ ಅರ್ಪಿಸುತ್ತೇನೆ. ಮನೀಶ್ ಅವರನ್ನು 530 ದಿನಗಳ ಕಾಲ ಜೈಲಿನಲ್ಲಿರಿಸಲಾಗಿತ್ತು. ಬಡವರ ಮಕ್ಕಳಿಗೆ ಒಳ್ಳೆಯ ಭವಿಷ್ಯ ನೀಡಿದ್ದೇ ಅವರ ತಪ್ಪಾಗಿತ್ತು. ಪ್ರೀತಿಯ ವಿದ್ಯಾರ್ಥಿಗಳೇ ನಿಮ್ಮ ಮನೀಷ್ ಅಂಕಲ್ ಮತ್ತೆ ಬರುತ್ತಿದ್ದಾರೆ’ ಎಂದು ಬರೆದಿದ್ದಾರೆ.