ಮಣಿಪುರ: ಶಂಕಿತ ಉಗ್ರರಿಂದ ರಾಕೆಟ್ ದಾಳಿ, ಎರಡು ಕಟ್ಟಡಗಳಿಗೆ ಹಾನಿ

Prasthutha|

ಇಂಫಾಲ್: ಮಣಿಪುರದಲ್ಲಿ ಶಂಕಿತ ಉಗ್ರರು ರಾಕೆಟ್ ದಾಳಿ ನಡೆಸಿದ್ದು, ಎರಡು ಕಟ್ಟಡಗಳಿಗೆ ಹಾನಿಯಾಗಿದೆ.

- Advertisement -


ಮಣಿಪುರದ ರಾಜಧಾನಿ ಇಂಫಾಲ್ ನಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಟ್ರೊಂಗ್ಲಾವೊಬಿಯ ತಗ್ಗು ಪ್ರದೇಶದ ಕಡೆಗೆ ಚುರಾಚಂದ್ ಪುರ ಜಿಲ್ಲೆಯ ಹತ್ತಿರದ ಗುಡ್ಡಗಾಡು ಪ್ರದೇಶಗಳ ಎತ್ತರದ ಸ್ಥಳಗಳಿಂದ ರಾಕೆಟ್ ಗಳನ್ನು ಹಾರಿಸಲಾಯಿತು.


ಉಡಾವಣೆಯಾದ ರಾಕೆಟ್ ಗಳ ವ್ಯಾಪ್ತಿಯು 3 ಕಿಲೋಮೀಟರ್ ಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. ದಾಳಿಯಲ್ಲಿ ಯಾರೂ ಗಾಯಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ರಾಕೆಟ್ ಸ್ಫೋಟದಿಂದಾಗಿ ಸ್ಥಳೀಯ ಸಮುದಾಯ ಭವನ ಹಾಗೂ ಮನೆಗೆ ಹಾನಿಯಾಗಿದೆ.



Join Whatsapp
Exit mobile version