Home ಟಾಪ್ ಸುದ್ದಿಗಳು ಮಣಿಪುರ ವಿಧಾನಸಭಾ ಚುನಾವಣೆ: ಮರು ಮತದಾನಕ್ಕೆ ಬಿಜೆಪಿ ಆಗ್ರಹ

ಮಣಿಪುರ ವಿಧಾನಸಭಾ ಚುನಾವಣೆ: ಮರು ಮತದಾನಕ್ಕೆ ಬಿಜೆಪಿ ಆಗ್ರಹ

ಇಂಫಾಲ : ಮಣಿಪುರದಲ್ಲಿ ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ 23 ಬೂತ್‌ಗಳಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಫೆಬ್ರವರಿ 28ರಂದು ಮೊದಲ ಹಂತದ ಮತದಾನ ನಡೆದು ಶೇ 78.03ರಷ್ಟು ಶೇಕಡಾವಾರು ಮತದಾನ ದಾಖಲಾಗಿತ್ತು. ಆದರೆ, ಮೊದಲ ಹಂತದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಬೂತ್‌ಗಳನ್ನು ವಶಪಡಿಸಿಕೊಂಡು ಚುನಾವಣಾ ಸಮಯದಲ್ಲಿ ಬೋಗಸ್ ಮತಗಳನ್ನು ಹಾಕುತ್ತಿದೆ ಎಂದು ಕೇಸರಿ ಪಕ್ಷ ಆರೋಪಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಬುಧವಾರ ಮಣಿಪುರದ ಬಿಜೆಪಿ ಕಾರ್ಯಕರ್ತರು ಮಣಿಪುರದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ಆ 23 ಬೂತ್‌ಗಳಿಗೆ ಮರು ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಮಣಿಪುರದಲ್ಲಿ ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಈ ಹಿಂದೆ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಮತದಾನ ನಿಗದಿಯಾಗಿತ್ತು. ನಂತರ ಚುನಾವಣಾ ದಿನಾಂಕಗಳನ್ನು ಪರಿಷ್ಕರಿಸಲಾಯಿತು. ಮಾರ್ಚ್ 10 ರಂದು ಐದು ರಾಜ್ಯಗಳಾದ ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಗೋವಾ ಮತ್ತು ಉತ್ತರಾಖಂಡಕ್ಕೆ ಮತ ಎಣಿಕೆ ನಡೆಯಲಿದೆ.

Join Whatsapp
Exit mobile version