ಮಂಗಳೂರು: ಟೆಂಪೊ ಉರುಳಿಬಿದ್ದು ಬೈಕ್ ಸವಾರ ಮೃತ

Prasthutha|

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಬೈಕ್ ಸವಾರನ ಮೇಲೆ ಟೆಂಪೊವೊಂದು ಉರುಳಿಬಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ಬಾಮಿ ಶಾಲೆಯ ಸಮೀಪದ ಇಳಿಜಾರು ಪ್ರದೇಶದಲ್ಲಿ ನಡೆದಿದೆ.

- Advertisement -

ಸುಂಕದಕಟ್ಟೆಯ ಚಾವಂಡಿಪಲ್ಕೆ ನಿವಾಸಿ ಶ್ರೀನಿವಾಸ (54) ಮೃತರು.

ಮಧ್ಯಾಹ್ನ ಕೈಕಂಬದಿಂದ ಗುರುಪುರಕ್ಕೆ ಹೋಗುತ್ತಿದ್ದ ಖಾಲಿ ಟೆಂಪೊವೊಂದು ಹೆದ್ದಾರಿ ಬದಿಯ ಹೊಂಡದಲ್ಲಿ ಸಿಲುಕಿತ್ತು ಈ ವೇಳೆ ಟೆಂಪೋ ಚಾಲಕ ಒಮ್ಮೆಲೇ ತೆಗೆಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ ಈ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್ ಟೆಂಪೋ ಅಡಿಯಲ್ಲಿ ಸಿಲುಕಿದ್ದು ಗಂಭೀರ ಗಾಯಗೊಂಡ ಶ್ರೀನಿವಾಸ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಶ್ರೀನಿವಾಸ್ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

Join Whatsapp
Exit mobile version